ಎಸ್ಐಆರ್ SIR ಫಾರ್ಮ್ ಎಂದರೇನು
ಒಬ್ಬ ಸಾಮಾನ್ಯ ವ್ಯಕ್ತಿಗೆ ಸರಳವಾಗಿ ತಿಳಿಯುವ ಹಾಗೆ ಇಲ್ಲಿ ಮಾಹಿತಿ ನೀಡಿದೆ
@@ಮುಂಜಾಗ್ರತೆಗಳು@@
💥ಯಾರು ಕೂಡ ಅವಸರ ಪಡಬೇಡಿ
💥 ಭಯಬೇಡ
💥ಅವಸರದಿಂದ ಫಾರ್ಮ್ ಅನ್ನು ಭರ್ತಿ ಮಾಡಬೇಡಿ
💥 ಎಲ್ಲದಕ್ಕೂ ಸೂಕ್ತವಾದ ಕಾಲಾವಕಾಶವಿದೆ
@ತಿಳಿಯಬೇಕಾದ ಮುಖ್ಯವಾದ ಮಾಹಿತಿಗಳು@
2002ರಲ್ಲಿ ಯಾರೆಲ್ಲಾ ಓಟನ್ನು ಹಾಕಿದ್ದೀರಾ ಅವರು ಫಾರ್ಮಿನ ಎಡ ಭಾಗವನ್ನು ಭರ್ತಿ ಮಾಡಬೇಕು
ಮೊದಲು ನೀವು 2002ರಲ್ಲಿ ಎಲ್ಲಿ ವೋಟನ್ನು ಹಾಕಿದ್ದೀರಾ ಅನ್ನೋ ಮಾಹಿತಿಯನ್ನು ನೀವು ತಿಳಿದುಕೊಳ್ಳಬೇಕು ತಿಳಿದ ಮೇಲೆ ನಿಮ್ಮ ಆ ಕ್ಷೇತ್ರದಲ್ಲಿ ಯಾವ ಅಂಗನವಾಡಿ ಕೇಂದ್ರವಿದೆ ಅಲ್ಲಿ ಹೋಗಿ 2002ರಲ್ಲಿ ವೋಟ್ ಹಾಕಿದ್ದ ಲಿಸ್ಟನ್ನು ಪಡೆದುಕೊಳ್ಳಿ
ಅದರಲ್ಲಿ ನೀವು ಎಲ್ಲಿ ವೋಟನ್ನು ಹಾಕಿದ್ದೀರಾ ಯಾವ ಜಾಗದಲ್ಲಿ ಹಾಕಿದ್ದೀರಾ ಯಾವ ಒಂದು ಕ್ರಮ ಸಂಖ್ಯೆಯಲ್ಲಿ ಹಾಕಿದ್ದೀರಾ ಎಷ್ಟನೇ ಬೂತಿನಲ್ಲಿ ಹಾಕಿದ್ದೀರಾ ಯಾವ ಕ್ಷೇತ್ರಕ್ಕೆ ಹಾಕಿದ್ದೀರಾ ಅನ್ನೋದು ಕೂಲಂಕುಶವಾಗಿ ಅಲ್ಲಿ ಸಿಗುತ್ತೆ.
ಇನ್ನೊಂದು ಮುಖ್ಯವಾದದ್ದು ನೀವು ಪಡೆದುಕೊಂಡ ಲಿಸ್ಟ್ ನಲ್ಲಿ ಸರಿ ಇದೆಯೋ ಅಥವಾ ತಪ್ಪಿದೆ ಎಂದು ತಿಳಿದುಕೊಳ್ಳಲು ಹತ್ತಿರದ
ಸೈಬರ್ ಗೆ ಭೇಟಿ ನೀಡಿ ನೀವು ಈ ಲಿಸ್ಟ್ ಅನ್ನು ಅಲ್ಲಿ
ಪರೀಕ್ಷಿಲಿಸಿ ಸರಿ ಇದ್ದರೆ ತೊಂದರೆ ಇಲ್ಲ ತಪ್ಪಾಗಿ ಮಾಹಿತಿ ಇದ್ದರೆ ನೀವು ಅಂಗನವಾಡಿ ಸಿಬ್ಬಂದಿ ಬಲಿ ಅಂದರೆ ನಿಮಗೆ ಯಾರು ಆ ಲಿಸ್ಟ್ ನೀಡಿರುತ್ತಾರೋ ಅವರ ಬಳಿ ನಿಮ್ಮ ಮಾಹಿತಿಯಲ್ಲಿ ವ್ಯತ್ಯಾಸ ಇರುವುದನ್ನು ಹೇಳಿ..
2002ರಲ್ಲಿ ವೋಟ್ ಹಾಕಿದ ವ್ಯಕ್ತಿಗಳು ಎಡಭಾಗವನ್ನು ಭರ್ತಿ ಮಾಡುವಾಗ ನಿಮ್ಮ ಕೈಯಲ್ಲಿರುವ ಯಾವ ಪ್ರತಿ ಲಿಸ್ಟಿರುತ್ತೋ ಅದೇ ರೀತಿಯಾಗಿ ಭರ್ತಿ ಮಾಡಿ ಅದರಲ್ಲಿ ನಿಮ್ಮ ಒಂದು ಸಂಬಂಧಿಕರ ಹೆಸರನ್ನು ಸೂಚಿಸುವಂತೆ ಹೇಳುತ್ತದೆ ಅಂದರೆ ಅಲ್ಲಿ ನೀವು ನಿಮ್ಮ ತಂದೆ ಅಥವಾ ತಾಯಿಯ ಹೆಸರು ಹಾಕಿ ತಂದೆ ಅಥವಾ ತಾಯಿಯ ಹೆಸರು ಹಾಕುವ ಮುನ್ನ ಇಬ್ಬರಲ್ಲಿ ಯಾರ ಡಾಕ್ಯುಮೆಂಟ್ ಎಲ್ಲವೂ ಸರಿಯಾಗಿದೆ ಅವರ ಹೆಸರನ್ನು ಹಾಕಿ
ಯಾಕಂದರೆ ಮುಂದೆ ನಿಮಗೆ ಯಾವುದೇ ರೀತಿಯ ತೊಂದರೆ ಆಗಬಾರದು..
ಇನ್ನು 2002ರಲ್ಲಿ ಯಾರೆಲ್ಲ ವೋಟನ್ನು ಹಾಕಲಿಲ್ಲ ಅಂದರೆ ಎರಡರ ನಂತರ ವೋಟ್ ಹಾಕುತ್ತಿರುವವರು ಫಾರ್ಮಿನ ಬಲಭಾಗವನ್ನು ಭರ್ತಿ ಮಾಡಬೇಕು ಇದರಲ್ಲಿ ಕೂಡ ನಿಮ್ಮ ಸಂಬಂಧಿಕರ ಹೆಸರನ್ನು ಸೂಚಿಸುವಾಗ ತಂದೆ ಅಥವಾ ತಾಯಿಯ ಹೆಸರನ್ನು ಸೂಚಿಸಿ
ಇಲ್ಲಿ ಕೂಡ ಅವರು ಯಾವ ಜಾಗದಲ್ಲಿ ಎಲ್ಲಿ ವೋಟನ್ನು ಹಾಕಿದ್ದಾರೆ ಕ್ರಮ ಸಂಖ್ಯೆ ಯಾವ ಭಾಗದಲ್ಲಿ ಅವೆಲ್ಲವನ್ನು ಕೂಡ ನಿಮ್ಮ ತಂದೆ ತಾಯಿಯ ಬಳಿ ಕೇಳಿ ಬರೆದಿಟ್ಟುಕೊಳ್ಳಿ..
ಇಲ್ಲಿ ಸೂಕ್ಷ್ಮವಾಗಿ ಗಮನಿಸಬೇಕಾದದ್ದು
2002 ರಲ್ಲಿ ನಿಮ್ಮ ಹೆಸರು ಅಂದರೆ ಉದಾಹರಣೆಗೆ ಸುಜಾತ ಆಗಿರುತ್ತದೆ ಈಗ ನಿಮ್ಮ ವೋಟರ್ ಐಡಿನಲ್ಲಿ ಸುಜಾತ ಏನ್ (SUJATHA N ) ಆಗಿರುತ್ತದೆ
ಇಲ್ಲಿ ನೀವು ಗಮನಿಸಬೇಕಾದದ್ದು 2002ರಲ್ಲಿ ನಿಮ್ಮ ಹೆಸರು ಹೇಗಿರುತ್ತದೋ ಅದೇ ರೀತಿ ಫಾರ್ಮಲ್ಲಿ ಫಿಲ್ ಮಾಡಬೇಕಾಗುತ್ತದೆ ಆದರೆ ಇಲ್ಲಿ ನಿಮಗೆ ಒಂದು ಸಂಶಯ ಬರಬಹುದು ನನ್ನ ನಿಜವಾದ ಹೆಸರು ಸುಜಾತ ಏನ್ ಪರವಾಗಿಲ್ಲ..
ಎಸ್ ಐ ಆರ್ ರೂಲ್ಸ್ ಪ್ರಕಾರ 2002ರಲ್ಲಿ ನಿಮ್ಮ ಹೆಸರು ಹೇಗಿರುತ್ತೋ ವೋಟರ್ ಲಿಸ್ಟಿನಲ್ಲಿ ಅದೇ ರೀತಿ ನೀವು ಹಾಕಬೇಕಾಗುತ್ತದೆ
AUGUST ತಿಂಗಳ ನಂತರ ನಿಮಗೆ ಒಂದು
ಪೋಷ್ಟ್ ಮುಖಾಂತರ ಲೆಟರ್ ಬರಬಹುದು ಅದರಲ್ಲಿ ನಿಮ್ಮ
ಹೆಸರಿಗೆ ಬದಲಾದ ಕಾರಣವನ್ನು ಹಾಗೂ ಅದಕ್ಕೆ ಬೇಕಾದ ದಾಖಲಾತಿಯನ್ನು ನೀಡಬೇಕಾಗುತ್ತದೆ..
ಫಾರ್ಮತ್ ಸಿಕ್ಕಿದ ತಕ್ಷಣ ಎರಡು ಅಥವಾ ಮೂರು ಪ್ರತಿಯನ್ನು ನೀವು ಮಾಡಿಟ್ಟುಕೊಳ್ಳಿ ಅಂದರೆ ಜೆರಾಕ್ಸ್ ಅನ್ನು ಮಾಡಿ ಇಟ್ಟುಕೊಳ್ಳಿ ಯಾಕಂದರೆ ಎಲ್ಲಾದರೂ ತಪ್ಪು ಮಾಹಿತಿ ಭರ್ತಿ ಮಾಡಿದರೆ ಮತ್ತೊಂದು ಫಾರ್ಮನ್ನು ಫಿಲ್ ಮಾಡಬಹುದು..
ಜನರಿಗೆ ಮಾಹಿತಿ ತಿಳಿಸುವುದೇ ನಮ್ಮ ಮುಖ್ಯ ಗುರಿಯಾಗಿದೆ
Support us ....
ಸಂಪಾದಕಿ
Yasmeen
moodabidri
Shahidsha11@gmail.com
Comments
Post a Comment