ಈ ವಿಷಯಕ್ಕೆ ಮಕ್ಕಳಿಗೆ ಮನೆಯಲ್ಲಿ ಹೊಡೆಯುತ್ತಿದ್ದರೆ ದಯವಿಟ್ಟು ಮಕ್ಕಳಿಗೆ ಹೊಡೆಯುವುದನ್ನು ನಿಲ್ಲಿಸಿ
ಬೇಸಿಗೆ ರಜೆ ಮುಗೀತು ಮಕ್ಕಳಿಗೆ ಶಾಲಾ ಪ್ರಾರಂಭವಾಗಿ ಒಂದು ತಿಂಗಳಾಯಿತು ಈಗ ಮಕ್ಕಳ ಒಂದು ಪಾಠದ ವಿಚಾರ ಶಾಲೆಯಲ್ಲಿ ಪ್ರಾರಂಭವಾಗಿರುತ್ತೆ ಇಲ್ಲಿ ನಾವು ಗಮನದಲ್ಲಿಟ್ಟುಕೊಳ್ಳುವ ವಿಷಯವೇನೆಂದರೆ ಮಕ್ಕಳಿಗೆ ಶಾಲೆಯ ವಾತಾವರಣ ಯಾವ ರೀತಿ ಅನಿಸುತ್ತಿದೆ , ಮಕ್ಕಳಿಗೆ ಶಾಲೆಗೆ ಹೋಗಲಿಕ್ಕೆ ಏನಾದರೂ ಅನಾನುಕೂಲ ಇದೆಯಾ, ಏನಾದರೂ ತೊಂದರೆ ಆಗುತ್ತಿದೆಯ? .. ಮೊದಲು ನೀವು ಮನೆಯಲ್ಲಿ ಇದನ್ನು ಪ್ರತಿಯೊಂದು ಮಕ್ಕಳ ಬಳಿ ಕೇಳಬೇಕು...
ಎರಡನೆಯ ವಿಷಯ ಬಂದು ಪ್ರತ್ಯೇಕವಾಗಿ ಮನೆಯಲ್ಲಿರುವ ತಾಯಂದಿರು ಗಮನದಲ್ಲಿಟ್ಟುಕೊಳ್ಳಬೇಕಾದ ವಿಷಯ
ಮಕ್ಕಳಿಗೆ ಈ ವಿಷಯದಲ್ಲಿ ಹೊಡೆಯುವುದನ್ನು ನಿಲ್ಲಿಸಿ!.
ಈಗಷ್ಟೇ ಹೋಗುವ " ಎಲ್ ಕೆ ಜಿ" "ಯು ಕೆ ಜಿ " ಒಂದರಿಂದ ಐದನೇ ತರಗತಿಯ ವಿಭಾಗದ ಮಕ್ಕಳು ಈ ಮಕ್ಕಳ ಮೇಲೆ ತುಂಬಾನೇ ಪ್ರೆಜರ್ ಹಾಕಲಿಕ್ಕೆ ಹೋಗಬೇಡಿ ಮೊದಲಿಗೆ ಬಂದು" ಎಲ್ ಕೆ ಜಿ" "ಯು ಕೆ ಜಿ " ಮಕ್ಕಳ ಮೇಲೆ ಪ್ರೆಶರ್ ಹಾಕಲೇಬಾರದು..
ಕೆಲವೊಂದು ಮಕ್ಕಳಿಗೆ ಅಷ್ಟು ವೇಗವಾಗಿ ಅಕ್ಷರ ಬರೆಯಲು ಅವರಿಂದ ಸಾಧ್ಯವಾಗುವುದಿಲ್ಲ.. ಕೆಲವೊಂದು ಮಕ್ಕಳಿಗೆ ಓದಲು ಸಾಧ್ಯವಾಗುವುದಿಲ್ಲ. ಅಕ್ಷರವನ್ನು ಗುರುತು ಹಿಡಿಯಲು ಸಾಧ್ಯವಾಗುವುದಿಲ್ಲ
ಎಲ್ಲಾ ಮಕ್ಕಳ ಮೆಮೊರಿ ಪವರ್ ಮೆದುಳಿನ ಒಂದು ಶಕ್ತಿ ಒಂದೇ ರೀತಿಯಲ್ಲಿ ಇರೋದಿಲ್ಲ..
ನಮ್ಮ ಮಕ್ಕಳು ಓದುವುದಿಲ್ಲ ಬೇರೆ ಮಕ್ಕಳು ಓದುತ್ತಿದ್ದಾರೆ ಅವರು ಬರೆಯುತ್ತಿದ್ದಾರೆ ಅಂತ ಹೇಳಿ ಮನೆಯಲ್ಲಿ ತಾಯಂದಿರು ಮಕ್ಕಳನ್ನು ಹೊಡೆಯುತೀರಾ.
ದಯವಿಟ್ಟು ಈ ಒಂದು ತಪ್ಪು ಮಾಡಲಿಕ್ಕೆ ಹೋಗಬೇಡಿ ಹಾಗೆ ನಿಮ್ಮ ಮಕ್ಕಳನ್ನು ಬೇರೆಯವರಿಗೆ ಹೋಲಿಕೆ ಮಾಡಲು ಹೋಗಲೇಬಾರದು..
ಸರ್ಕಾರವೇ ಮಕ್ಕಳಲ್ಲಿ ಸಮಾನತೆ ಕಾಣಬೇಕು ಅಂತ ಹೇಳಿ ವಾರಪೂರ್ತಿ ಸಮವಸ್ತ್ರ ಧರಿಸಲು ಆದೇಶವನ್ನು ನೀಡಿದೆ ಆದರೆ ನಾವು ತಾಯಂದಿರು ಮನೆಯಲ್ಲಿ ಬೇರೆ ಮಕ್ಕಳಿಗೆ ಹೋಲಿಕೆ ಮಾಡುತ್ತಾ ಅವರ ಒಂದು ಸಮಾನತೆಯನ್ನು ಕಿತ್ತುಕೊಳ್ಳುವ ರೀತಿ ನಡೆದುಕೊಳ್ಳಬಾರದು...
ಈಗಷ್ಟೇ ಆ ಮಕ್ಕಳು ಶಾಲೆ ಅಂದ್ರೆ ಏನು ಅಂತ ಅರ್ಥ ಮಾಡಿಕೊಳ್ಳುತ್ತಿದೆ.. ತಾಯಂದಿರು ಮಕ್ಕಳಿಗೆ ಮನೆಯಲ್ಲಿ ಶಾಲೆಯ ಮನೆ ಕೆಲಸ ಮಾಡಿಸುವಾಗ ದುಡುಕಬೇಡಿ ಅವರೊಟ್ಟಿಗೆ ಸಿಟ್ಟಾಗಿ ಮಾತನಾಡಬೇಡಿ ತುಂಬಾನೇ ಸೂಕ್ಷ್ಮವಾಗಿ ಅವರಿಗೆ ತಿಳಿಯುವ ಹಾಗೆ ಹೇಳಿಕೊಡಿ ಯಾಕಂದ್ರೆ ಮಕ್ಕಳಿಗೆ ನೀವು ಬೈದಷ್ಟು ನೀವು ಕೋಪಗೊಂಡಷ್ಟು ಅವರಲ್ಲಿ ಶಾಲೆಯ ಬಗ್ಗೆ ನಕಾರಾತ್ಮಕ ಯೋಚನೆಗಳು ಬೆಳೆದು ಶಾಲೆಯ ಮೇಲೆ ಇದ್ದ ಪ್ರೀತಿ ಮಕ್ಕಳಿಂದ ದೂರ ಹೋಗುತ್ತೆ..
ಸಂಪಾದಕಿ
Yasmeenriyaz

Comments
Post a Comment