ಕಷ್ಟಗಳನ್ನು ಜೀವನದಲ್ಲಿ ಹೇಗೆ ಎದುರಿಸಬೇಕು?
ಜೀವನವನ್ನು ಬದಲಾಯಿಸುವ ಕೆಲವು ಸಲಹೆಗಳು..
ಈ ಪ್ರಪಂಚದಲ್ಲಿ ಪ್ರತಿಯೊಂದು ಜೀವಿಗೂ ಕಷ್ಟ ನೋವುಗಳಿರುತ್ತೆ ಆದರೆ ಮನುಷ್ಯ ಮಾತ್ರ ಕಷ್ಟ ಬಂದರೆ ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾನೆ.
ಮೊದಲಿಗೆ ಈ ಕಷ್ಟ ನಮಗೆ ಯಾಕೆ ಬಂತು ಈ ಕಷ್ಟದಿಂದ ಹೇಗೆ ಹೊರಬರಬೇಕು ಈ ಕಷ್ಟದಿಂದ ನಾವು ಜೀವನದಲ್ಲಿ ಯಾವ ಪಾಠ ಕಲಿತುಕೊಂಡೆವು.. ಈ ತರ ಸಕಾರಾತ್ಮಕ ಯೋಚನೆಗಳನ್ನು ಮಾಡಿದರೆ, ಖಂಡಿತವಾಗಿಯೂ ನಾವು ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಪರಿಸ್ಥಿತಿ ಬರೋದಿಲ್ಲ..
ಇಂದು ಮನುಷ್ಯನು ಬಲಹೀನತೆಗೆ ಒಳಗೊಂಡು ತನಗೆ ಏನೇ ಒಂದು ನೋವು ಬಂದರೂ ಅದನ್ನು ಎದುರಿಸುವ ಬದಲು ಜೀವವನ್ನು ಕಳೆದುಕೊಳ್ಳುತ್ತಿದ್ದಾನೆ..
ಇತ್ತೀಚೆಗಷ್ಟೇ ನಡೆದ ಒಂದು ದುರಂತ ಕಥೆ ನೀವು ಕೇಳಿರಬಹುದು ಉಸ್ತಾದ್ ಅಂದರೆ ಮಕ್ಕಳಿಗೆ ವಿದ್ಯೆ ಕಲಿಸುವ ಒಬ್ಬ ಮದರಸದ ಗುರು
ಮನೆ ಸಾಲ ಇದೆ ಎಂದು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ..
ಆತ್ಮಹತ್ಯೆ ಮಹಾ ಪಾಪ ಎಂದು ಮಕ್ಕಳಿಗೆ ಹೇಳಿಕೊಟ್ಟ ಅದೇ ಗುರು ಅವರೇ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ..
ಮನುಷ್ಯನು ಮಾನಸಿಕವಾಗಿ ಬಲಹೀನತೆಗೆ ಒಳಗೊಂಡಾಗ ಇಂತಹ ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾನೆ...
ದಯವಿಟ್ಟು ಇಂತಹ ಒಂದು ಕೆಟ್ಟ ನಿರ್ಧಾರ ಯಾವತ್ತೂ ತೆಗೆದುಕೊಳ್ಳಬೇಡಿ ಒಂದು ಸ್ವಲ್ಪ ತಾಳ್ಮೆಯಿಂದ ಯೋಚಿಸಿದರೆ ಖಂಡಿತವಾಗಿಯೂ ಪ್ರತಿಯೊಂದು ಕಷ್ಟಕ್ಕೂ ಪರಿಹಾರದ ಮಾರ್ಗಗಳು ಇದ್ದೇ ಇರುತ್ತೆ..
ಇವತ್ತು ಅನೇಕರು ಸರಿಯಾದ ಅಂಗಗಳು ಇಲ್ಲದೆ ಅಂಗಲವಿಕಲತೆಯಿಂದ ಬಳಲುತ್ತಿದ್ದಾರೆ ಆದರೆ ಅವರು ಯಾವತ್ತೂ ಕೂಡ ತಾವು ಸಾಯ್ಬೇಕು ಅನ್ನೋ ಕೆಟ್ಟ ನಿರ್ಧಾರ ಮಾಡುವುದಿಲ್ಲ ಅವರಲ್ಲಿಯೂ ಕೂಡ ಬದುಕಬೇಕು ಅನ್ನೋ ಹುಮ್ಮಸ್ಸಿದೆ ಏನಾದರೂ ಸಾಧನೆ ಮಾಡಬೇಕೆನ್ನೋ ಛಲ ಇದೆ, ಏನೇ ಕಷ್ಟ ಬಂದರೂ ಅದನ್ನು ಎದುರಿಸುವ ಧೈರ್ಯ ಇದೆ.
ಅಂದಮೇಲೆ ಎಲ್ಲಾ ರೀತಿಯಲ್ಲಿ ಆರೋಗ್ಯಕರವಾಗಿರುವ ಮನುಷ್ಯನಿಗೆ ಇಂದು ಕಷ್ಟಗಳು ಬಂದರೆ ಎದುರಿಸುವ ಧೈರ್ಯ ಇಲ್ಲವಾಯಿತೆ?
ಗಾಝಾದಲ್ಲಿ ನಡೆದ ಬಾಂಬ್ ಸ್ಪೋಟದಿಂದ ಮನೆ ಮಠಗಳನ್ನು ಕಳೆದುಕೊಂಡು ಒಂದು ಹನಿ ನೀರಿಗೂ, ಒಂದು ತುತ್ತು ಊಟಕ್ಕೂ ಪರದಾಡುತ್ತಿರುವ ಅಲ್ಲಿಯ ಜನರು.. ಅಷ್ಟೇ ಅಲ್ಲದೆ ತಂದೆ ತಾಯಿ ಇಲ್ಲದೆ ಅನಾಥರಾದ ಅವೆಷ್ಟೋ ಮಕ್ಕಳು, ಕಣ್ಣೆದುರೇ ತನ್ನ ಮಕ್ಕಳನ್ನು ಕಳೆದುಕೊಂಡ ಅವೆಷ್ಟು ತಂದೆ ತಾಯಿಗಳು..
ಆದರೆ ಅವರೆಂದಿಗೂ ಕೆಟ್ಟ ನಿರ್ಧಾರವನ್ನು ತೆಗೆದುಕೊಂಡಿಲ್ಲ ತಮ್ಮನ್ನು ಸೃಷ್ಟಿಸಿದ ಸೃಷ್ಟಿಕರ್ತನ ಮೇಲೆ ಅಪಾರವಾದ ನಂಬಿಕೆಯನ್ನು ಇಟ್ಟು ಆತನು ನೀಡಿರುವ ಜೀವವನ್ನು ಇಂದಿಗೂ ಕಾಪಾಡಿಕೊಳ್ಳುತ್ತಿದ್ದಾರೆ...
ಯಾಕೆಂದರೆ ಸೃಷ್ಟಿಕರ್ತನು ನೀಡಿರುವ ಅತ್ಯುತ್ತಮವಾದ ಜೀವಿ ಎಂದರೆ ಅದು ಮನುಷ್ಯ ಜನ್ಮ ಅಂದಮೇಲೆ ಆತನು ನೀಡಿರುವ ಈ ದೇಹಕ್ಕೆ ಯಾವುದೇ ಹಾನಿಯನ್ನು ಮಾಡುವ ಅಧಿಕಾರ ಕೂಡ ನಮಗೆ ಇರುವುದಿಲ್ಲ ..
ಇನ್ನು ಮುಂದೆ ದಯವಿಟ್ಟು ನಿಮ್ಮ ಜೀವನದಲ್ಲಿ ಯಾವುದೇ ತೊಂದರೆಗಳು ಬಂದರೆ ನಿಮ್ಮ ಆಪ್ತರಲ್ಲಿ ನಿಮ್ಮ ನೋವುಗಳನ್ನು ಹಂಚಿಕೊಳ್ಳಿ ಹಾಗೆ ಕೆಲವೊಂದು ಇಷ್ಟು ಸಲಹೆಗಳನ್ನು ಪಡೆದುಕೊಳ್ಳಿ ಖಂಡಿತವಾಗಿಯೂ ನಿಮ್ಮ ಕಷ್ಟ ನೋವುಗಳಿಗೆ ಪರಿಹಾರ ಸಿಕ್ಕೇ ಸಿಗುತ್ತೆ..
ಆತ್ಮಹತ್ಯೆ ಮಹಾ ಪಾಪ ಅನ್ನುವವರು ದಯವಿಟ್ಟು ಕಾಮೆಂಟ್ ಮುಖಾಂತರ ತಿಳಿಸಿ..
ಕೆಲವೊಂದು ಒಳ್ಳೆ ಸಲಹೆಗಳು ಕಮೆಂಟ್ ಮುಖಾಂತರ ನೀಡಿ..
ಸಂಪಾದಕಿ
yasmeen riyaz
contact us:
Email:shahidsha11@gmail.com
Youtube: yasmeenriyaa
Insta : Yachu_riya
Facebook page : Yasmeen Riyaz
Blog : yasmitalk
( http://yasmitalk.blogspot.com)
WhatsApp: Follow the Yachuriya channel on WhatsApp: https://whatsapp.com/channel/0029VbCy685CHDye2rvAbs3t

Comments
Post a Comment