Skip to main content

Posts

Showing posts from 2026

ಒಂದು ದಿನ ಎಲ್ಲವನ್ನೂ ಬಿಟ್ಟು ಹೋಗಲೇಬೇಕು

ಮಾನವನು ಎಷ್ಟೇ ದೊಡ್ಡವನಾಗಿದ್ದರೂ,  ಎಷ್ಟೇ ಸಂಪತ್ತನ್ನು ಗಳಿಸಿದ್ದರೂ, ಎಷ್ಟೇ ಅಧಿಕಾರವನ್ನು ಹೊಂದಿದ್ದರೂ ಒಂದು ದಿನ ಈ ಲೋಕವನ್ನು ಬಿಟ್ಟು ಹೋಗಲೇಬೇಕು. ಇದೇ ಜೀವನದ ಅಚಲ ಸತ್ಯ. ನಾವು ಈ ಭೂಮಿಗೆ ಖಾಲಿ ಕೈಯಲ್ಲಿ ಬರುತ್ತೇವೆ, ಖಾಲಿ ಕೈಯಲ್ಲೇ ಹೋಗುತ್ತೇವೆ. ನಮ್ಮೊಂದಿಗೆ ನಮ್ಮ ಒಳ್ಳೆಯ ಕಾರ್ಯಗಳು , ಮಾಡಿದ ಸತ್ಕರ್ಮಗಳು ಬೇರೆಯವರಿಗೆ ನೀಡಿದ ದಾನ ಧರ್ಮ , ಮಾಡಿದ ಉಪವಾಸ,  ಹೊರತು ಹಣ,  ಹೆಸರು ಐಷಾರಾಮಿ ಮನೆ ದುಬಾರಿ ಕಾರು ನಿನ್ನ ಸಂಪತ್ತು , ಕೊನೆಗೆ  ನೀನು ಹಾಕಿಕೊಂಡ ಉಡುಪು ಕೂಡ ನಿನ್ನೊಂದಿಗೆ ಬರುವುದಿಲ್ಲ..ಇಷ್ಟು  ತಿಳಿದಿದ್ದರೆ ಇಂದು ಯಾರೂ ಕೂಡ " ಮರಣ" ವನ್ನು ದ್ವೇಷಿಸುತ್ತಿರಲಿಲ್ಲ.. ಇಂದಿನ ಜಗತ್ತಿನಲ್ಲಿ ಪ್ರತಿಯೊಬ್ಬರೂ ಹಣ, ಆಸ್ತಿ, ಅಧಿಕಾರ, ಹೆಸರಿನ ಹಿಂದೆ ಓಡುತ್ತಿದ್ದಾರೆ. ಉತ್ತಮ ಜೀವನವನ್ನು ಕಟ್ಟಿಕೊಳ್ಳುವುದು ತಪ್ಪಲ್ಲ. ಆದರೆ ಈ ಎಲ್ಲದರ ಮಧ್ಯೆ ಈ ಲೋಕ ಶಾಶ್ವತವಲ್ಲ ಎಂಬ ದೊಡ್ಡ ಸತ್ಯವನ್ನು ನಾವು ಕೆಲವೊಮ್ಮೆ ಮರೆತುಬಿಡುತ್ತೇವೆ  . ಆದರೆ ಜೀವನದ ಕೊನೆಯ ಕ್ಷಣದಲ್ಲಿ ಅವನಿಗೆ ಅರಿವಾಗುವುದು ಒಂದೇ ವಿಷಯ—ಇಷ್ಟು ವರ್ಷಗಳ ಓಟದ ಅಂತ್ಯ ಇಷ್ಟೇ ಎಂದು. ನಾವು ಪ್ರತಿ ದಿನ   ನೋಡುತ್ತೇವೆ. ಹೂವು ಅರಳುತ್ತದೆ, ಕೆಲವೇ ದಿನಗಳಲ್ಲಿ ಒಣಗುತ್ತದೆ. ದೊಡ್ಡ ದೊಡ್ಡ ಮರಗಳೂ ಒಂದು ದಿನ ನೆಲಕ್ಕುರುಳುತ್ತವೆ. ಕೆಲವೊಮ್ಮೆ ಪ್ರಕೃತಿಯ ವಿಕೋಪಕ್ಕೆ ಇಡೀ ಊರಿಗೆ ಊರೇ ನಾಶವಾಗುತ್ತದೆ...

ಮನೆ ಮನೆಗೆ MESCOM ಸಿಬ್ಬಂದಿ ಭೇಟಿ – ದಾಖಲೆ ಪರಿಶೀಲನೆ ಏಕೆ? ಸಿಬ್ಬಂದಿಗಳು ಭೇಟಿ ನೀಡಿದಾಗ ಸಾರ್ವಜನಿಕರು ಮಾಹಿತಿಯನ್ನು ತಿಳಿದುಕೊಳ್ಳದೆ ಈ ತಪ್ಪನ್ನು ಮಾಡಬೇಡಿ..

  ಮನೆ ಮನೆಗೆ MESCOM ಸಿಬ್ಬಂದಿ ಭೇಟಿ – ದಾಖಲೆ ಪರಿಶೀಲನೆ ಏಕೆ?  ಸಿಬ್ಬಂದಿಗಳು ಭೇಟಿ ನೀಡಿದಾಗ ಸಾರ್ವಜನಿಕರು ಮಾಹಿತಿಯನ್ನು  ತಿಳಿದುಕೊಳ್ಳದೆ  ಈ ತಪ್ಪನ್ನು ಮಾಡಬೇಡಿ.. ಇತ್ತೀಚಿನ ದಿನಗಳಲ್ಲಿ ದಕ್ಷಿಣ ಕನ್ನಡ ಸೇರಿದಂತೆ ಕರ್ನಾಟಕದ ಹಲವು ಭಾಗಗಳಲ್ಲಿ MESCOM (ವಿದ್ಯುತ್ ಸರಬರಾಜು ಸಂಸ್ಥೆ) ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ ವಿದ್ಯುತ್ ಸಂಪರ್ಕಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಇದರಿಂದ ಹಲವರಿಗೆ "ಏಕೆ ದಾಖಲೆ ಕೇಳುತ್ತಿದ್ದಾರೆ?", "ಮತ್ತೆ ಅರ್ಜಿ ಹಾಕಬೇಕೇ?", "ಇದು ಕಡ್ಡಾಯವೇ?" ಎಂಬ ಪ್ರಶ್ನೆಗಳು  ಮೂಡಿದೆ. ಹೌದು ಮೊದಲು ಮನೆಗೆ ಬರುವವರು ಅಧಿಕೃತ MESCOM ಸಿಬ್ಬಂದಿಯೇ ಎಂಬುದನ್ನು ಅವರ ಗುರುತಿನ ಚೀಟಿ ನೋಡಿ ಖಚಿತಪಡಿಸಿಕೊಳ್ಳಿ. ಯಾವುದೇ ಅನುಮಾನ ಇದ್ದರೆ ಸಮೀಪದ MESCOM ಕಚೇರಿಯನ್ನು ಸಂಪರ್ಕಿಸಿ ಮಾಹಿತಿ ಪಡೆಯಿರಿ. ದಾಖಲೆಗಳ ಪ್ರತಿಗಳನ್ನು ನೀಡುವ ಮೊದಲು ಅವುಗಳ ಅಗತ್ಯವನ್ನು ಕೇಳಿ ತಿಳಿದುಕೊಳ್ಳಿ. ಅಪರಿಚಿತ ವ್ಯಕ್ತಿಗಳಿಗೆ ವೈಯಕ್ತಿಕ ದಾಖಲೆಗಳನ್ನು ನೀಡಬೇಡಿ. ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಮರುಪರಿಶೀಲನೆ ಪ್ರಕ್ರಿಯೆಯನ್ನು ಕರ್ನಾಟಕ ಸರ್ಕಾರದ ಇಂಧನ ಇಲಾಖೆಯ ನಿರ್ದೇಶನದಂತೆ ರಾಜ್ಯದ ವಿದ್ಯುತ್ ಸರಬರಾಜು ಸಂಸ್ಥೆಗಳು (ESCOMಗಳು) ನಡೆಸುತ್ತಿವೆ. ಈ ಪರಿಶೀಲನೆಯ ಉದ್ದೇಶ ಗ್ರಾಹಕರ ವಿದ್ಯುತ್ ಸಂಪರ್ಕದ ಮಾಹಿತಿಯನ್ನು ನವೀಕರಿಸುವುದು ಭವಿಷ್ಯದಲ್ಲಿ ...

ಕಷ್ಟಗಳನ್ನು ಜೀವನದಲ್ಲಿ ಹೇಗೆ ಎದುರಿಸಬೇಕು? ಜೀವನವನ್ನು ಬದಲಾಯಿಸುವ ಕೆಲವು ಸಲಹೆಗಳು

  ಕಷ್ಟಗಳನ್ನು ಜೀವನದಲ್ಲಿ ಹೇಗೆ ಎದುರಿಸಬೇಕು?   ಜೀವನವನ್ನು ಬದಲಾಯಿಸುವ  ಕೆಲವು ಸಲಹೆಗಳು.. ಈ ಪ್ರಪಂಚದಲ್ಲಿ  ಪ್ರತಿಯೊಂದು ಜೀವಿಗೂ ಕಷ್ಟ  ನೋವುಗಳಿರುತ್ತೆ ಆದರೆ ಮನುಷ್ಯ ಮಾತ್ರ ಕಷ್ಟ  ಬಂದರೆ ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾನೆ. ಮೊದಲಿಗೆ ಈ ಕಷ್ಟ ನಮಗೆ ಯಾಕೆ ಬಂತು ಈ ಕಷ್ಟದಿಂದ ಹೇಗೆ ಹೊರಬರಬೇಕು ಈ ಕಷ್ಟದಿಂದ ನಾವು ಜೀವನದಲ್ಲಿ ಯಾವ ಪಾಠ ಕಲಿತುಕೊಂಡೆವು..  ಈ ತರ ಸಕಾರಾತ್ಮಕ ಯೋಚನೆಗಳನ್ನು ಮಾಡಿದರೆ, ಖಂಡಿತವಾಗಿಯೂ ನಾವು ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಪರಿಸ್ಥಿತಿ ಬರೋದಿಲ್ಲ.. ಇಂದು ಮನುಷ್ಯನು  ಬಲಹೀನತೆಗೆ ಒಳಗೊಂಡು ತನಗೆ ಏನೇ ಒಂದು ನೋವು ಬಂದರೂ ಅದನ್ನು ಎದುರಿಸುವ ಬದಲು ಜೀವವನ್ನು ಕಳೆದುಕೊಳ್ಳುತ್ತಿದ್ದಾನೆ.. ಇತ್ತೀಚೆಗಷ್ಟೇ ನಡೆದ ಒಂದು ದುರಂತ ಕಥೆ ನೀವು ಕೇಳಿರಬಹುದು ಉಸ್ತಾದ್   ಅಂದರೆ ಮಕ್ಕಳಿಗೆ ವಿದ್ಯೆ ಕಲಿಸುವ ಒಬ್ಬ  ಮದರಸದ  ಗುರು ಮನೆ ಸಾಲ ಇದೆ ಎಂದು  ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.. ಆತ್ಮಹತ್ಯೆ ಮಹಾ ಪಾಪ ಎಂದು ಮಕ್ಕಳಿಗೆ ಹೇಳಿಕೊಟ್ಟ ಅದೇ ಗುರು ಅವರೇ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.. ಮನುಷ್ಯನು  ಮಾನಸಿಕವಾಗಿ ಬಲಹೀನತೆಗೆ ಒಳಗೊಂಡಾಗ ಇಂತಹ  ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾನೆ... ದಯವಿಟ್ಟು ಇಂತಹ ಒಂದು ಕೆಟ್ಟ ನಿರ್ಧಾರ  ಯಾವತ್ತೂ ತೆಗ...

ಹೆಂಡತಿಯನ್ನು ಅನುಮಾನಿಸುವ ಗಂಡ

  ಹೆಂಡತಿಯನ್ನು ಅನುಮಾನಿಸುವ ಗಂಡಂದಿರೇ... ಒಂದು ಕ್ಷಣ ಯೋಚಿಸಿ! " ಅನುಮಾನ ಹುಟ್ಟಲು ಕೆಲವೇ ಕ್ಷಣಗಳು ಸಾಕು. ಆದರೆ ಅದು ಒಂದು ಸಂಬಂಧವನ್ನು ಹಾಳು ಮಾಡಲು ಸಾಕಾಗಬಹುದು." ಇಂದಿನ ಸಮಾಜದಲ್ಲಿ ಅನೇಕ ದಾಂಪತ್ಯಗಳು ಮುರಿಯಲು ಕಾರಣವಾಗುತ್ತಿರುವ ದೊಡ್ಡ ಸಮಸ್ಯೆಗಳಲ್ಲಿ ಒಂದು ಕಾರಣವಿಲ್ಲದ ಅನುಮಾನ. ಪ್ರೀತಿ ಇರುವ ಜಾಗದಲ್ಲಿ ವಿಶ್ವಾಸ ಇರಬೇಕು. ಆದರೆ ವಿಶ್ವಾಸದ ಜಾಗವನ್ನು ಅನುಮಾನ ಆವರಿಸಿದಾಗ, ಸಂತೋಷವಾಗಿದ್ದ ಮನೆಯೂ ನಿಧಾನವಾಗಿ ಸ್ಮಶಾನವಾಗುತ್ತದೆ... ಕೆಲವರ ಗಂಡಂದಿರು, ಹೆಂಡತಿ ಫೋನ್‌ನಲ್ಲಿ ಮಾತನಾಡಿದರೆ ಪ್ರಶ್ನೆ ಮಾಡುತ್ತಾರೆ. ಸ್ವಲ್ಪ ತಡವಾಗಿ ಮನೆಗೆ ಬಂದರೆ ಅನುಮಾನ ಪಡುತ್ತಾರೆ. ಅವಳ ಮೊಬೈಲ್ ಪರಿಶೀಲಿಸುವುದು, ಸಾಮಾಜಿಕ ಜಾಲತಾಣಗಳನ್ನು ಗಮನಿಸುವುದು, ಯಾರೊಂದಿಗೆ ಮಾತನಾಡುತ್ತಿದ್ದಾಳೆ ಎಂದು ವಿಚಾರಿಸುವುದು—ಇವೆಲ್ಲವನ್ನೂ "ಪ್ರೀತಿ" ಎಂದು ಭಾವಿಸುತ್ತಾರೆ. ಆದರೆ ಒಂದು ಪ್ರಶ್ನೆ ಕೇಳಿಕೊಳ್ಳಿ.ಇದು ನಿಜವಾಗಿಯೂ ಪ್ರೀತಿಯೇ? ಅಥವಾ ನಿಮ್ಮಲ್ಲಿರುವ ಅನುಮಾನವ ? ಒಬ್ಬ ಮಹಿಳೆ ಮದುವೆಯಾದ ನಂತರ ಹೊಸ ಜಾಗ ಹೊಸ ಮನೆ, ಹೊಸ ಸಂಬಂಧಗಳು ಮತ್ತು ಹೊಸ ಜವಾಬ್ದಾರಿಗಳನ್ನು ಸ್ವೀಕರಿಸುತ್ತಾಳೆ. ಕುಟುಂಬದ ನೆಮ್ಮದಿಗಾಗಿ ಅನೇಕ ಬಾರಿ ತನ್ನ ಆಸೆಗಳನ್ನು ತ್ಯಾಗ ಮಾಡುತ್ತಾಳೆ. ಅಂತಹ ವ್ಯಕ್ತಿಗೆ ಪ್ರತಿದಿನ ಅನುಮಾನ ಎಂಬ ಶಿಕ್ಷೆ ನೀಡುವುದು ನ್ಯಾಯವೇ? ಯಾರನ್ನಾದರೂ ನಿರಂತರವಾಗಿ ಅನುಮಾನಿಸಿದರೆ, ಮೊದಲಿಗೆ ಅವರ ನಗು ಕ...

ಮನುಷ್ಯನು ಭೂಮಿಯ ಮೇಲೆ ಏಕೆ ಸೃಷ್ಟಿಸಲ್ಪಟ್ಟನು? – ಕುರಆನ್, ಬೈಬಲ್ ಮತ್ತು ಭಗವದ್ಗೀತೆ ಏನು ಹೇಳುತ್ತೆ !

ಮನುಷ್ಯನು ಭೂಮಿಯ ಮೇಲೆ ಏಕೆ ಸೃಷ್ಟಿಸಲ್ಪಟ್ಟನು? – ಕುರಆನ್, ಬೈಬಲ್ ಮತ್ತು ಭಗವದ್ಗೀತೆ ಏನು ಹೇಳುತ್ತೆ .. ಮಾನವ ಜೀವನದ ಅತಿದೊಡ್ಡ ಪ್ರಶ್ನೆಗಳಲ್ಲಿ ಒಂದು ಎಂದರೆ, "ನಾನು ಯಾಕೆ ಹುಟ್ಟಿದ್ದೇನೆ?" ಅಥವ "ಈ ಭೂಮಿಯ ಮೇಲೆ ನನ್ನ ನಿಜವಾದ ಉದ್ದೇಶವೇನು?" ಎಂಬುದು. ವಿಜ್ಞಾನವು ಮನುಷ್ಯನ ದೈಹಿಕ ಸೃಷ್ಟಿಯ ಬಗ್ಗೆ ವಿವರಿಸಬಹುದು, ಆದರೆ ಜೀವನದ ಉದ್ದೇಶದ ಬಗ್ಗೆ ಧರ್ಮಗಳು ಮತ್ತು ಆಧ್ಯಾತ್ಮಿಕ ಗ್ರಂಥಗಳು ಆಳವಾದ ಉತ್ತರಗಳನ್ನು ನೀಡುತ್ತವೆ. ಇಸ್ಲಾಂ, ಬೈಬಲ್ ಮತ್ತು ಭಗವದ್ಗೀತೆ – ಈ ಮೂರು ಧಾರ್ಮಿಕ ಪರಂಪರೆಗಳೂ ಮನುಷ್ಯನ ಜೀವನವು ಕೇವಲ ತಿನ್ನುವುದು, ಸಂಪಾದಿಸುವುದು ಮತ್ತು ಸಾಯುವುದಕ್ಕೆ ಮಾತ್ರ ಸೀಮಿತವಲ್ಲ ಎಂದು ತಿಳಿಸುತ್ತವೆ. ಜೀವನಕ್ಕೆ ಒಂದು ಉನ್ನತ ಗುರಿ ಇದೆ ಎಂದು ಅವು ಬೋಧಿಸುತ್ತವೆ. ಇಸ್ಲಾಂ ಧರ್ಮದ ಪ್ರಕಾರ ಮನುಷ್ಯನ ಸೃಷ್ಟಿಯ ಮೂಲ ಉದ್ದೇಶ! ಇಸ್ಲಾಂನಲ್ಲಿ ಮನುಷ್ಯನು ಅಲ್ಲಾಹನ ವಿಶೇಷ ಸೃಷ್ಟಿಯಾಗಿದ್ದಾನೆ. ಕುರ್‌ಆನ್‌ನಲ್ಲಿ ಅಲ್ಲಾಹನು ಹೀಗೆ ಹೇಳುತ್ತಾನೆ: "ನಾನು ಜಿನ್ನರು ಮತ್ತು ಮನುಷ್ಯರನ್ನು ನನ್ನನ್ನು ಆರಾಧಿಸುವುದಕ್ಕಾಗಿಯೇ ಸೃಷ್ಟಿಸಿದ್ದೇನೆ." (ಕುರ್‌ಆನ್ 51:56) ಇಲ್ಲಿ ಆರಾಧನೆ ಎಂದರೆ ಕೇವಲ ನಮಾಝ್, ಉಪವಾಸ ಅಥವಾ ಧಾರ್ಮಿಕ ಆಚರಣೆಗಳಲ್ಲ. ಮನುಷ್ಯನು ತನ್ನ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಅಲ್ಲಾಹನ ಆದೇಶದಂತೆ ನಡೆದುಕೊಳ್ಳುವುದು, ಸತ್ಯನಿಷ್ಠೆಯಿಂದ ಬದುಕುವುದು ಮತ್ತು ಇತರರಿಗ...

ಗಂಡ-ಹೆಂಡತಿಯ ಬಾಂಧವ್ಯ ಹೇಗಿರಬೇಕು? | ಸುಖೀ ದಾಂಪತ್ಯ ಜೀವನಕ್ಕೆ ಅಮೂಲ್ಯ ಸಲಹೆಗಳು

 ಗಂಡ-ಹೆಂಡತಿಯ ಬಾಂಧವ್ಯ.   ಹೇಗಿರಬೇಕು? | ಸುಖೀ ದಾಂಪತ್ಯ.    ಜೀವನಕ್ಕೆ ಅಮೂಲ್ಯ ಸಲಹೆಗಳು ಗಂಡ ಹೆಂಡತಿ ಜಗಳ ನಮ್ಮ ಹಿರಿಯರು ಹೇಳಿದ ಹಾಗೆ. ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಆದರೆ ಈಗ ಗಂಡ ಹೆಂಡತಿ ಜಗಳ ವಿಚ್ಛೇದನ ಸಿಗುವ ತನಕ  ಆಗಿನ ಕಾಲಕ್ಕೂ ಈಗಿನ ಕಾಲಕ್ಕೂ ಒಂದು ಸಣ್ಣ ಗಾದೆ ಮಾತು ಎಷ್ಟೊಂದು ಬದಲಾವಣೆಯನ್ನು ಸೂಚಿಸುತ್ತದೆ   ಇಸ್ಲಾಂ ಧಾರ್ಮಿಕದಲ್ಲಿ  ಉಲ್ಲೇಖವಾದ ಒಂದು ಮಾತಿದೆ  ಗಂಡ ಹೆಂಡತಿ ಒಬ್ಬರಿಗೊಬ್ಬರು ಮಾತನಾಡುವಾಗ ಅವರ ಕಣ್ಣಿನಲ್ಲಿ  ಅವರ ಪ್ರತಿಬಿಂಬ ಕಾಣಬೇಕು ಅಂದರೆ ಒಬ್ಬರಿಗೊಬ್ಬರು ಮಾತನಾಡುವಾಗ    ಮುಖಮುಖಿಯಾಗಿ ಮಾತನಾಡಬೇಕು.   ಇದರಿಂದ ಪ್ರೀತಿ ಹೆಚ್ಚಾಗುತ್ತೆ ಸಂಬಂಧ ಇನ್ನು ಕೂಡ ಗಟ್ಟಿಯಾಗುತ್ತೆ ಆದರೆ ಈಗ  ಮುಖ ನೋಡುವುದು ಬಿಡಿ  ಮಾತನಾಡಲು ಕೂಡ ಸಮಯ ಇರುವುದಿಲ್ಲ   ಯಾಕಂದರೆ ಈಗ ಎಲ್ಲವೂ ಆಧುನಿಕವಾಗಿದೆ ಒಂದೇ ಮನೆಯಲ್ಲಿ ಇದ್ದುಕೊಂಡು ಹೆಂಡತಿಯೊಂದಿಗೆ ಮಾತನಾಡಬೇಕೆಂದರೆ ಮೆಸೇಜ್ ಮುಖಾಂತರ ಸಂದೇಶವನ್ನು ನೀಡುವುದು 🫥  ಎಲ್ಲವೂ ಈಗ ಫೋನ್ ಮುಖಾಂತರ ನಡೆಯುತ್ತಿದೆ..  ನಾನು ಮೊದಲಿಗೆ ಹೇಳಿದ ಹಾಗೆ  ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಇದನ್ನು ಹಿರಿಯರು ಪಾಲಿಸುತ್ತಿದ್ದರು ಹಾಗೆ ಅದೇ ರೀತಿ ಕೂಡ ನಡೆಯುತ್ತಿದ್ದರು ಯಾಕೆಂದರೆ ಅಂದಿನ ಕಾಲದಲ್ಲಿ   ಗಂಡ ಹೆಂಡತಿಯೊ...

ಭಾವನಾತ್ಮಕ ಮಾತುಗಳು

  ಒಬ್ಬ ವ್ಯಕ್ತಿಗೆ ನೋವು ಕೊಡುವುದು ತುಂಬಾ ಸುಲಭ. ಒಂದು ಕಠಿಣ ಮಾತು... ಒಂದು ಅವಮಾನ... ಒಂದು ನಿರ್ಲಕ್ಷ್ಯ... ಇಷ್ಟೇ ಸಾಕು, ಯಾರಾದರೂ ಮನಸ್ಸು ಒಡೆಯಲು. ಆದರೆ ಆ ಮಾತು ಕೇಳಿದ ವ್ಯಕ್ತಿ ಎಷ್ಟು ರಾತ್ರಿ ನಿದ್ದೆ ಮಾಡದೆ ಕಣ್ಣೀರು ಹಾಕಿರಬಹುದು ಎಂಬುದು ನಮಗೆ ಗೊತ್ತಿರುವುದಿಲ್ಲ. ಒಂದು ಸಣ್ಣ ಕಥೆ... ಒಬ್ಬ ಹುಡುಗ ಕೋಪದಲ್ಲಿ ತನ್ನ ಸ್ನೇಹಿತನಿಗೆ ತುಂಬಾ ಕಠಿಣ ಮಾತು ಹೇಳಿದ. ನಂತರ ಕ್ಷಮೆ ಕೇಳಿದ. ಆಗ ಆ ಸ್ನೇಹಿತ ಒಂದು ಬಿಳಿ ಕಾಗದ ಕೊಟ್ಟು ಹೇಳಿದ: "ಇದನ್ನು ಮಡಚು." ಹುಡುಗ ಕಾಗದವನ್ನು ಮಡಚಿದ. "ಈಗ ಮತ್ತೆ ಮೊದಲಿನಂತೆ ಮಾಡು." ಅವನು ಎಷ್ಟೇ ಪ್ರಯತ್ನಿಸಿದರೂ ಕಾಗದ ಮೊದಲಿನಂತಾಗಲಿಲ್ಲ. ಆಗ ಸ್ನೇಹಿತ ಹೇಳಿದ: "ಮನಸ್ಸೂ ಇದೇ ರೀತಿ. ಕ್ಷಮೆ ಸಿಗಬಹುದು, ಆದರೆ ಗಾಯದ ಗುರುತು ಯಾವಾಗಲೂ ಉಳಿಯಬಹುದು." ಆದ್ದರಿಂದ... ಮಾತನಾಡುವ ಮೊದಲು ಯೋಚಿಸಿ. ಕೋಪ ಬರುವ ಮೊದಲು ತಾಳ್ಮೆ ಇಡಿ. ಯಾರ ಹೃದಯಕ್ಕೂ ನೋವಾಗದಂತೆ ಬದುಕಿ. ಯಾಕೆಂದರೆ... " ಗಾಯವಾದ ದೇಹ ಗುಣವಾಗಬಹುದು. ಆದರೆ ಮಾತಿನಿಂದ ಗಾಯವಾದ ಮನಸ್ಸು ಗುಣವಾಗಲು ಕೆಲವೊಮ್ಮೆ ಒಂದು ಜೀವಮಾನವೇ ಬೇಕಾಗುತ್ತದೆ." ಸಂಪಾದಕಿ:  Yasmeen riyaz  Follow me  Youtube: yasmeenriyaa https://www.youtube.com/@Yasmeenriyaa Instagram: yasmeenriyaz  WhatsApp:yachuriya  Follow the Yachuriya channel on WhatsApp:  http...

ಈ ವಿಷಯಕ್ಕೆ ಮಕ್ಕಳಿಗೆ ಮನೆಯಲ್ಲಿ ಹೊಡೆಯುತ್ತಿದ್ದರೆ ದಯವಿಟ್ಟು ಮಕ್ಕಳಿಗೆ ಹೊಡೆಯುವುದನ್ನು ನಿಲ್ಲಿಸಿ

  ಈ ವಿಷಯಕ್ಕೆ ಮಕ್ಕಳಿಗೆ ಮನೆಯಲ್ಲಿ ಹೊಡೆಯುತ್ತಿದ್ದರೆ ದಯವಿಟ್ಟು ಮಕ್ಕಳಿಗೆ ಹೊಡೆಯುವುದನ್ನು ನಿಲ್ಲಿಸಿ  ಬೇಸಿಗೆ ರಜೆ ಮುಗೀತು ಮಕ್ಕಳಿಗೆ ಶಾಲಾ ಪ್ರಾರಂಭವಾಗಿ ಒಂದು ತಿಂಗಳಾಯಿತು ಈಗ ಮಕ್ಕಳ ಒಂದು ಪಾಠದ ವಿಚಾರ ಶಾಲೆಯಲ್ಲಿ ಪ್ರಾರಂಭವಾಗಿರುತ್ತೆ ಇಲ್ಲಿ ನಾವು ಗಮನದಲ್ಲಿಟ್ಟುಕೊಳ್ಳುವ ವಿಷಯವೇನೆಂದರೆ ಮಕ್ಕಳಿಗೆ ಶಾಲೆಯ ವಾತಾವರಣ ಯಾವ ರೀತಿ ಅನಿಸುತ್ತಿದೆ , ಮಕ್ಕಳಿಗೆ ಶಾಲೆಗೆ ಹೋಗಲಿಕ್ಕೆ ಏನಾದರೂ ಅನಾನುಕೂಲ ಇದೆಯಾ, ಏನಾದರೂ ತೊಂದರೆ ಆಗುತ್ತಿದೆಯ? .. ಮೊದಲು ನೀವು ಮನೆಯಲ್ಲಿ ಇದನ್ನು ಪ್ರತಿಯೊಂದು ಮಕ್ಕಳ ಬಳಿ ಕೇಳಬೇಕು...  ಎರಡನೆಯ ವಿಷಯ ಬಂದು ಪ್ರತ್ಯೇಕವಾಗಿ ಮನೆಯಲ್ಲಿರುವ ತಾಯಂದಿರು ಗಮನದಲ್ಲಿಟ್ಟುಕೊಳ್ಳಬೇಕಾದ ವಿಷಯ  ಮಕ್ಕಳಿಗೆ ಈ ವಿಷಯದಲ್ಲಿ ಹೊಡೆಯುವುದನ್ನು ನಿಲ್ಲಿಸಿ!.   ಈಗಷ್ಟೇ ಹೋಗುವ " ಎಲ್ ಕೆ ಜಿ" "ಯು ಕೆ ಜಿ " ಒಂದರಿಂದ ಐದನೇ ತರಗತಿಯ ವಿಭಾಗದ ಮಕ್ಕಳು ಈ ಮಕ್ಕಳ ಮೇಲೆ ತುಂಬಾನೇ ಪ್ರೆಜರ್ ಹಾಕಲಿಕ್ಕೆ ಹೋಗಬೇಡಿ ಮೊದಲಿಗೆ ಬಂದು" ಎಲ್ ಕೆ ಜಿ" "ಯು ಕೆ ಜಿ " ಮಕ್ಕಳ ಮೇಲೆ ಪ್ರೆಶರ್ ಹಾಕಲೇಬಾರದು..   ಕೆಲವೊಂದು ಮಕ್ಕಳಿಗೆ ಅಷ್ಟು ವೇಗವಾಗಿ ಅಕ್ಷರ ಬರೆಯಲು ಅವರಿಂದ ಸಾಧ್ಯವಾಗುವುದಿಲ್ಲ.. ಕೆಲವೊಂದು ಮಕ್ಕಳಿಗೆ ಓದಲು ಸಾಧ್ಯವಾಗುವುದಿಲ್ಲ. ಅಕ್ಷರವನ್ನು ಗುರುತು ಹಿಡಿಯಲು ಸಾಧ್ಯವಾಗುವುದಿಲ್ಲ  ಎಲ್ಲಾ ಮಕ್ಕಳ ಮೆಮೊರಿ ಪವರ್ ಮೆದುಳಿನ ಒಂದು ಶಕ್ತಿ ಒಂದೇ...

ಮಾಂಸದಿಂದ ತುಂಬಿದ ಈ ದೇಹ ಶಾಶ್ವತವಲ್ಲ

 ಮಾಂಸದಿಂದ ತುಂಬಿದ ಈ ದೇಹ ಶಾಶ್ವತವಲ್ಲ ಹುಚ್ಚು ಮಾನವ ಮಾಂಸ ಖಂಡಗಳಿಂದ ತುಂಬಿದ ದೇಹವನ್ನು ಅಪಾರವಾಗಿ ಪ್ರೀತಿಸುತ್ತಾನೆ ಅದರಲ್ಲೂ ತಾರತಮ್ಯವನ್ನು ಮಾಡುತ್ತಾ ಒಬ್ಬರಿಗೊಬ್ಬರು ಕೀಳರಿಮೆಯಿಂದ ನಡೆಯುತ್ತಿದ್ದಾರೆ  ನಾವು ಮರಣ ಹೊಂದಿದ ಮೇಲೆ ನಮ್ಮ ದೇಹವನ್ನು ಕುಕ್ಕಿ ತಿನ್ನಲು ಆವೆಷ್ಟೋ ಜೀವಿಗಳು ಕಾಯುತ್ತಿದ್ದವೆ.. ಯಾವ ದೇಹದ ಅಂದ ಚಂದವು ಶಾಶ್ವತವಲ್ಲ ಎಲ್ಲಾ ದೇಹಕ್ಕೂ ಮುಪ್ಪು ಬರಲಿದೆ ಸಾವು ಖಚಿತವಾಗಿದೆ.. ಇಂದು ನಿನ್ನ ದೇಹವು ಬಲಿಷ್ಠವಾಗಿರಬಹುದು, ಸುಂದರವಾಗಿರಬಹುದು, ಆರೋಗ್ಯವಾಗಿರಬಹುದು. ಆದರೆ ಈ ದೇಹವು ಶಾಶ್ವತವಲ್ಲ. ಒಂದು ದಿನ ಅದು ವೃದ್ಧವಾಗುತ್ತದೆ, ದುರ್ಬಲವಾಗುತ್ತದೆ ಮತ್ತು ಅಂತಿಮವಾಗಿ ಮಣ್ಣಿನಲ್ಲಿ ಲೀನವಾಗುತ್ತದೆ. ಅಲ್ಲಾಹನು ಪ್ರತಿಯೊಬ್ಬ ಮನುಷ್ಯನಿಗೂ ಮರಣವನ್ನು ನಿಶ್ಚಯಿಸಿದ್ದಾನೆ. ಮರಣದಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಈ ಲೋಕದ ಸೌಂದರ್ಯ, ಸಂಪತ್ತು, ಅಧಿಕಾರ ಮತ್ತು ದೇಹದ ಬಲದ ಬಗ್ಗೆ ಅಹಂಕಾರ ಪಡುವುದು ಮೂರ್ಖತನ.. ಯೌವ್ವನವು ಅಲ್ಲಾಹನು ನೀಡಿದ ಅತ್ಯುತ್ತಮವಾದ ಕಾಲವಾಗಿದೆ.. ಆ ಸಮಯದಲ್ಲಿ  ಪರಪುರುಷ ಅಥವಾ ಪರ ಸ್ತ್ರೀಯರ ಮೇಲೆ ಆಸೆ ಪಡುವುದು ಅಕ್ಷರಸ ತಪ್ಪಾಗಿದೆ . ನಿಮ್ಮನ್ನು ಅಲ್ಲಾಹನಿಂದ ದೂರ ಮಾಡುವ ದೊಡ್ಡ ಕಾರಣಗಳಲ್ಲಿ ಕಾಮ (ಶಹ್ವತ್) ಮತ್ತು ಕ್ರೋಧ (ಘದಬ್) ಪ್ರಮುಖವಾಗಿವೆ. ಇವುಗಳನ್ನು ನಿಯಂತ್ರಿಸದಿದ್ದರೆ ಮನುಷ್ಯನು ಅನೇಕ ಪಾಪಗಳಲ್ಲಿ ಬೀಳುತ್ತಾನೆ. ಕಾಮ...

SIR ENUMERATION FORM FILLING DETAILS IN KANNADA

 ಎಸ್ಐಆರ್ SIR ಫಾರ್ಮ್ ಎಂದರೇನು  ಒಬ್ಬ ಸಾಮಾನ್ಯ ವ್ಯಕ್ತಿಗೆ ಸರಳವಾಗಿ ತಿಳಿಯುವ ಹಾಗೆ ಇಲ್ಲಿ ಮಾಹಿತಿ ನೀಡಿದೆ  @@ಮುಂಜಾಗ್ರತೆಗಳು@@ 💥ಯಾರು ಕೂಡ ಅವಸರ ಪಡಬೇಡಿ 💥 ಭಯಬೇಡ  💥ಅವಸರದಿಂದ ಫಾರ್ಮ್ ಅನ್ನು ಭರ್ತಿ ಮಾಡಬೇಡಿ 💥 ಎಲ್ಲದಕ್ಕೂ ಸೂಕ್ತವಾದ ಕಾಲಾವಕಾಶವಿದೆ  @ತಿಳಿಯಬೇಕಾದ ಮುಖ್ಯವಾದ ಮಾಹಿತಿಗಳು@  2002ರಲ್ಲಿ ಯಾರೆಲ್ಲಾ ಓಟನ್ನು ಹಾಕಿದ್ದೀರಾ ಅವರು ಫಾರ್ಮಿನ ಎಡ ಭಾಗವನ್ನು ಭರ್ತಿ ಮಾಡಬೇಕು  ಮೊದಲು ನೀವು 2002ರಲ್ಲಿ ಎಲ್ಲಿ ವೋಟನ್ನು ಹಾಕಿದ್ದೀರಾ ಅನ್ನೋ ಮಾಹಿತಿಯನ್ನು ನೀವು ತಿಳಿದುಕೊಳ್ಳಬೇಕು ತಿಳಿದ ಮೇಲೆ ನಿಮ್ಮ ಆ ಕ್ಷೇತ್ರದಲ್ಲಿ ಯಾವ ಅಂಗನವಾಡಿ ಕೇಂದ್ರವಿದೆ ಅಲ್ಲಿ ಹೋಗಿ 2002ರಲ್ಲಿ ವೋಟ್ ಹಾಕಿದ್ದ ಲಿಸ್ಟನ್ನು ಪಡೆದುಕೊಳ್ಳಿ  ಅದರಲ್ಲಿ ನೀವು ಎಲ್ಲಿ ವೋಟನ್ನು ಹಾಕಿದ್ದೀರಾ ಯಾವ ಜಾಗದಲ್ಲಿ ಹಾಕಿದ್ದೀರಾ ಯಾವ ಒಂದು ಕ್ರಮ ಸಂಖ್ಯೆಯಲ್ಲಿ ಹಾಕಿದ್ದೀರಾ ಎಷ್ಟನೇ ಬೂತಿನಲ್ಲಿ ಹಾಕಿದ್ದೀರಾ ಯಾವ ಕ್ಷೇತ್ರಕ್ಕೆ ಹಾಕಿದ್ದೀರಾ ಅನ್ನೋದು ಕೂಲಂಕುಶವಾಗಿ ಅಲ್ಲಿ ಸಿಗುತ್ತೆ.  ಇನ್ನೊಂದು ಮುಖ್ಯವಾದದ್ದು ನೀವು ಪಡೆದುಕೊಂಡ ಲಿಸ್ಟ್ ನಲ್ಲಿ ಸರಿ ಇದೆಯೋ ಅಥವಾ ತಪ್ಪಿದೆ ಎಂದು ತಿಳಿದುಕೊಳ್ಳಲು ಹತ್ತಿರದ  ಸೈಬರ್ ಗೆ ಭೇಟಿ ನೀಡಿ ನೀವು ಈ ಲಿಸ್ಟ್ ಅನ್ನು ಅಲ್ಲಿ   ಪರೀಕ್ಷಿಲಿಸಿ ಸರಿ ಇದ್ದರೆ ತೊಂದರೆ ಇಲ್ಲ ತಪ್ಪಾಗಿ ಮಾಹಿತಿ ಇದ್ದರೆ ನೀವು ಅಂಗನ...