Skip to main content

ಒಂದು ದಿನ ಎಲ್ಲವನ್ನೂ ಬಿಟ್ಟು ಹೋಗಲೇಬೇಕು



ಮಾನವನು ಎಷ್ಟೇ ದೊಡ್ಡವನಾಗಿದ್ದರೂ, 


ಎಷ್ಟೇ ಸಂಪತ್ತನ್ನು ಗಳಿಸಿದ್ದರೂ, ಎಷ್ಟೇ ಅಧಿಕಾರವನ್ನು ಹೊಂದಿದ್ದರೂ ಒಂದು ದಿನ ಈ ಲೋಕವನ್ನು ಬಿಟ್ಟು ಹೋಗಲೇಬೇಕು. ಇದೇ ಜೀವನದ ಅಚಲ ಸತ್ಯ. ನಾವು ಈ ಭೂಮಿಗೆ ಖಾಲಿ ಕೈಯಲ್ಲಿ ಬರುತ್ತೇವೆ, ಖಾಲಿ ಕೈಯಲ್ಲೇ ಹೋಗುತ್ತೇವೆ. ನಮ್ಮೊಂದಿಗೆ ನಮ್ಮ ಒಳ್ಳೆಯ ಕಾರ್ಯಗಳು , ಮಾಡಿದ ಸತ್ಕರ್ಮಗಳು ಬೇರೆಯವರಿಗೆ ನೀಡಿದ ದಾನ ಧರ್ಮ ,ಮಾಡಿದ ಉಪವಾಸ,  ಹೊರತು ಹಣ,  ಹೆಸರು ಐಷಾರಾಮಿ ಮನೆ ದುಬಾರಿ ಕಾರು ನಿನ್ನ ಸಂಪತ್ತು , ಕೊನೆಗೆ  ನೀನು ಹಾಕಿಕೊಂಡ ಉಡುಪು ಕೂಡ ನಿನ್ನೊಂದಿಗೆ ಬರುವುದಿಲ್ಲ..ಇಷ್ಟು  ತಿಳಿದಿದ್ದರೆ ಇಂದು ಯಾರೂ ಕೂಡ " ಮರಣ" ವನ್ನು ದ್ವೇಷಿಸುತ್ತಿರಲಿಲ್ಲ..


ಇಂದಿನ ಜಗತ್ತಿನಲ್ಲಿ ಪ್ರತಿಯೊಬ್ಬರೂ ಹಣ, ಆಸ್ತಿ, ಅಧಿಕಾರ, ಹೆಸರಿನ ಹಿಂದೆ ಓಡುತ್ತಿದ್ದಾರೆ. ಉತ್ತಮ ಜೀವನವನ್ನು ಕಟ್ಟಿಕೊಳ್ಳುವುದು ತಪ್ಪಲ್ಲ. ಆದರೆ ಈ ಎಲ್ಲದರ ಮಧ್ಯೆ ಈ ಲೋಕ ಶಾಶ್ವತವಲ್ಲ ಎಂಬ ದೊಡ್ಡ ಸತ್ಯವನ್ನು ನಾವು ಕೆಲವೊಮ್ಮೆ ಮರೆತುಬಿಡುತ್ತೇವೆ  .

ಆದರೆ ಜೀವನದ ಕೊನೆಯ ಕ್ಷಣದಲ್ಲಿ ಅವನಿಗೆ ಅರಿವಾಗುವುದು ಒಂದೇ ವಿಷಯ—ಇಷ್ಟು ವರ್ಷಗಳ ಓಟದ ಅಂತ್ಯ ಇಷ್ಟೇ ಎಂದು.

ನಾವು ಪ್ರತಿ ದಿನ  ನೋಡುತ್ತೇವೆ. ಹೂವು ಅರಳುತ್ತದೆ, ಕೆಲವೇ ದಿನಗಳಲ್ಲಿ ಒಣಗುತ್ತದೆ. ದೊಡ್ಡ ದೊಡ್ಡ ಮರಗಳೂ ಒಂದು ದಿನ ನೆಲಕ್ಕುರುಳುತ್ತವೆ. ಕೆಲವೊಮ್ಮೆ ಪ್ರಕೃತಿಯ ವಿಕೋಪಕ್ಕೆ ಇಡೀ ಊರಿಗೆ ಊರೇ ನಾಶವಾಗುತ್ತದೆ. ಈ ಸುತ್ತಲಿನ ಪ್ರಕೃತಿಯೇ ನಮಗೆ ಪ್ರತಿದಿನ ಒಂದು ಪಾಠ ಹೇಳುತ್ತದೆ—ಈ ಲೋಕದಲ್ಲಿ ಶಾಶ್ವತವಾದದ್ದು ಯಾವುದೂ ಇಲ್ಲ.


ನಮ್ಮ ಜೀವನವು ಒಂದು ಪ್ರಯಾಣದಂತೆ..  ಈ ಭೂಮಿಗೆ ಬಂದ ದಿನದಿಂದಲೇ ನಮ್ಮ ಪ್ರಯಾಣ ಆರಂಭವಾಗುತ್ತದೆ. ಹಾಗೆಯೇ ಒಂದು ದಿನ ಈ ಪ್ರಯಾಣ ಮುಗಿಯುತ್ತದೆ. ಆ ದಿನ ಯಾವಾಗ ಬರುತ್ತದೆ ಯಾವ ಕ್ಷಣಕ್ಕೆ ಈ ಲೋಕವನ್ನು ನಾವು ತ್ಯಜಿಸಬೇಕೆಂಬುದು ಯಾರಿಗೂ ತಿಳಿದಿಲ್ಲ. ಆದ್ದರಿಂದ ಪ್ರತಿಯೊಂದು ಕ್ಷಣವೂ ನಮಗೆ ಅಮೂಲ್ಯವಾದದ್ದು...


ಈ ಬದುಕಿನ ನಿಜವಾದ ಉದ್ದೇಶ ಪ್ರತಿಯೊಂದು ದಿನವನ್ನೂ ಅರ್ಥಪೂರ್ಣವಾಗಿ ಬದುಕುವುದು. ಕುಟುಂಬದೊಂದಿಗೆ ಸಮಯ ಕಳೆಯುವುದು. ಅಗತ್ಯವಿರುವವರಿಗೆ ಸಹಾಯ ಮಾಡುವುದು. ಯಾರಿಗೂ ಅನ್ಯಾಯ ಮಾಡದಿರುವುದು. ಕ್ಷಣಿಕ ಕೋಪಕ್ಕಾಗಿ ಶಾಶ್ವತ ಸಂಬಂಧಗಳನ್ನು ಕಳೆದುಕೊಳ್ಳದಿರುವುದು. ಏಕೆಂದರೆ ಜೀವನ ಯಾವಾಗ ಅಂತ್ಯಗೊಳ್ಳುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ.


ಸಾವು ಎಲ್ಲರಿಗೂ ಸಮಾನ. ಅದು ಶ್ರೀಮಂತರನ್ನೂ ಬಡವರನ್ನೂ,  ಯಾರನ್ನು ಬಿಡುವುದಿಲ್ಲ. ಈ ಸತ್ಯವನ್ನು ಅರಿತವನು ಅಹಂಕಾರವನ್ನು ಬಿಟ್ಟು ವಿನಮ್ರನಾಗುತ್ತಾನೆ. ದ್ವೇಷವನ್ನು ಬಿಟ್ಟು ಪ್ರೀತಿಯಿಂದ ನಡೆದುಕೊಳ್ಳುತ್ತಾನೆ
ಸದಾ ಸತ್ಕಾರ್ಯಗಳನ್ನು ಮಾಡುತ್ತಾನೆ ದಾನ ಧರ್ಮಗಳನ್ನು ಕೊಡುತ್ತಾನೆ. ಕುಟುಂಬದೊಂದಿಗೆ ಸಮಯ ಕಳೆಯುತ್ತಾನೆ. ಅಗತ್ಯವಿರುವವರಿಗೆ ಸಹಾಯ ಮಾಡುತ್ತಾನೆ. ಆತನು ಯಾರಿಗೂ ಅನ್ಯಾಯ ಮಾಡುವುದಿಲ್ಲ.  ಕೋಪಕ್ಕಾಗಿ ಶಾಶ್ವತ ಸಂಬಂಧಗಳನ್ನು ಕಳೆದುಕೊಳ್ಳುವುದಿಲ್ಲ.
ಮಾಡಿದ ಎಲ್ಲಾ ಕಾರ್ಯವು ಒಳ್ಳೆಯ ಕೆಲಸಗಳಾಗಿರುತ್ತದೆ.

ಮನುಷ್ಯನ  ಬದುಕು ನಿಜವಾಗಿಯೂ ಮೂರು ದಿನದ ಆಟದಂತೆಯೇ. ಮೊದಲ ದಿನ ಹುಟ್ಟು, ಎರಡನೇ ದಿನ ಬದುಕು, ಮೂರನೇ ದಿನ ಅಂತ್ಯ. ಈ ಮೂರು ದಿನಗಳ ನಡುವಿನ ಸಮಯವನ್ನು ಹೇಗೆ ಬಳಸುತ್ತೇವೆ ಎಂಬುದೇ ನಮ್ಮ ಜೀವನದ ನಿಜವಾದ ಅರ್ಥ.

contact us:

Email:shahidsha11@gmail.com 

Insta : Yachu_riya 

f.b : Yasmeen Riyaz

Blog : yasmitalk 

( http://yasmitalk.blogspot.com)

WhatsApp: Follow the Yachuriya channel on WhatsApp: https://whatsapp.com/channel/0029VbCy685CHDye2rvAbs3t


Comments

Popular posts from this blog

ಮಾಂಸದಿಂದ ತುಂಬಿದ ಈ ದೇಹ ಶಾಶ್ವತವಲ್ಲ

 ಮಾಂಸದಿಂದ ತುಂಬಿದ ಈ ದೇಹ ಶಾಶ್ವತವಲ್ಲ ಹುಚ್ಚು ಮಾನವ ಮಾಂಸ ಖಂಡಗಳಿಂದ ತುಂಬಿದ ದೇಹವನ್ನು ಅಪಾರವಾಗಿ ಪ್ರೀತಿಸುತ್ತಾನೆ ಅದರಲ್ಲೂ ತಾರತಮ್ಯವನ್ನು ಮಾಡುತ್ತಾ ಒಬ್ಬರಿಗೊಬ್ಬರು ಕೀಳರಿಮೆಯಿಂದ ನಡೆಯುತ್ತಿದ್ದಾರೆ  ನಾವು ಮರಣ ಹೊಂದಿದ ಮೇಲೆ ನಮ್ಮ ದೇಹವನ್ನು ಕುಕ್ಕಿ ತಿನ್ನಲು ಆವೆಷ್ಟೋ ಜೀವಿಗಳು ಕಾಯುತ್ತಿದ್ದವೆ.. ಯಾವ ದೇಹದ ಅಂದ ಚಂದವು ಶಾಶ್ವತವಲ್ಲ ಎಲ್ಲಾ ದೇಹಕ್ಕೂ ಮುಪ್ಪು ಬರಲಿದೆ ಸಾವು ಖಚಿತವಾಗಿದೆ.. ಇಂದು ನಿನ್ನ ದೇಹವು ಬಲಿಷ್ಠವಾಗಿರಬಹುದು, ಸುಂದರವಾಗಿರಬಹುದು, ಆರೋಗ್ಯವಾಗಿರಬಹುದು. ಆದರೆ ಈ ದೇಹವು ಶಾಶ್ವತವಲ್ಲ. ಒಂದು ದಿನ ಅದು ವೃದ್ಧವಾಗುತ್ತದೆ, ದುರ್ಬಲವಾಗುತ್ತದೆ ಮತ್ತು ಅಂತಿಮವಾಗಿ ಮಣ್ಣಿನಲ್ಲಿ ಲೀನವಾಗುತ್ತದೆ. ಅಲ್ಲಾಹನು ಪ್ರತಿಯೊಬ್ಬ ಮನುಷ್ಯನಿಗೂ ಮರಣವನ್ನು ನಿಶ್ಚಯಿಸಿದ್ದಾನೆ. ಮರಣದಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಈ ಲೋಕದ ಸೌಂದರ್ಯ, ಸಂಪತ್ತು, ಅಧಿಕಾರ ಮತ್ತು ದೇಹದ ಬಲದ ಬಗ್ಗೆ ಅಹಂಕಾರ ಪಡುವುದು ಮೂರ್ಖತನ.. ಯೌವ್ವನವು ಅಲ್ಲಾಹನು ನೀಡಿದ ಅತ್ಯುತ್ತಮವಾದ ಕಾಲವಾಗಿದೆ.. ಆ ಸಮಯದಲ್ಲಿ  ಪರಪುರುಷ ಅಥವಾ ಪರ ಸ್ತ್ರೀಯರ ಮೇಲೆ ಆಸೆ ಪಡುವುದು ಅಕ್ಷರಸ ತಪ್ಪಾಗಿದೆ . ನಿಮ್ಮನ್ನು ಅಲ್ಲಾಹನಿಂದ ದೂರ ಮಾಡುವ ದೊಡ್ಡ ಕಾರಣಗಳಲ್ಲಿ ಕಾಮ (ಶಹ್ವತ್) ಮತ್ತು ಕ್ರೋಧ (ಘದಬ್) ಪ್ರಮುಖವಾಗಿವೆ. ಇವುಗಳನ್ನು ನಿಯಂತ್ರಿಸದಿದ್ದರೆ ಮನುಷ್ಯನು ಅನೇಕ ಪಾಪಗಳಲ್ಲಿ ಬೀಳುತ್ತಾನೆ. ಕಾಮ...

ಗಂಡ-ಹೆಂಡತಿಯ ಬಾಂಧವ್ಯ ಹೇಗಿರಬೇಕು? | ಸುಖೀ ದಾಂಪತ್ಯ ಜೀವನಕ್ಕೆ ಅಮೂಲ್ಯ ಸಲಹೆಗಳು

 ಗಂಡ-ಹೆಂಡತಿಯ ಬಾಂಧವ್ಯ.   ಹೇಗಿರಬೇಕು? | ಸುಖೀ ದಾಂಪತ್ಯ.    ಜೀವನಕ್ಕೆ ಅಮೂಲ್ಯ ಸಲಹೆಗಳು ಗಂಡ ಹೆಂಡತಿ ಜಗಳ ನಮ್ಮ ಹಿರಿಯರು ಹೇಳಿದ ಹಾಗೆ. ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಆದರೆ ಈಗ ಗಂಡ ಹೆಂಡತಿ ಜಗಳ ವಿಚ್ಛೇದನ ಸಿಗುವ ತನಕ  ಆಗಿನ ಕಾಲಕ್ಕೂ ಈಗಿನ ಕಾಲಕ್ಕೂ ಒಂದು ಸಣ್ಣ ಗಾದೆ ಮಾತು ಎಷ್ಟೊಂದು ಬದಲಾವಣೆಯನ್ನು ಸೂಚಿಸುತ್ತದೆ   ಇಸ್ಲಾಂ ಧಾರ್ಮಿಕದಲ್ಲಿ  ಉಲ್ಲೇಖವಾದ ಒಂದು ಮಾತಿದೆ  ಗಂಡ ಹೆಂಡತಿ ಒಬ್ಬರಿಗೊಬ್ಬರು ಮಾತನಾಡುವಾಗ ಅವರ ಕಣ್ಣಿನಲ್ಲಿ  ಅವರ ಪ್ರತಿಬಿಂಬ ಕಾಣಬೇಕು ಅಂದರೆ ಒಬ್ಬರಿಗೊಬ್ಬರು ಮಾತನಾಡುವಾಗ    ಮುಖಮುಖಿಯಾಗಿ ಮಾತನಾಡಬೇಕು.   ಇದರಿಂದ ಪ್ರೀತಿ ಹೆಚ್ಚಾಗುತ್ತೆ ಸಂಬಂಧ ಇನ್ನು ಕೂಡ ಗಟ್ಟಿಯಾಗುತ್ತೆ ಆದರೆ ಈಗ  ಮುಖ ನೋಡುವುದು ಬಿಡಿ  ಮಾತನಾಡಲು ಕೂಡ ಸಮಯ ಇರುವುದಿಲ್ಲ   ಯಾಕಂದರೆ ಈಗ ಎಲ್ಲವೂ ಆಧುನಿಕವಾಗಿದೆ ಒಂದೇ ಮನೆಯಲ್ಲಿ ಇದ್ದುಕೊಂಡು ಹೆಂಡತಿಯೊಂದಿಗೆ ಮಾತನಾಡಬೇಕೆಂದರೆ ಮೆಸೇಜ್ ಮುಖಾಂತರ ಸಂದೇಶವನ್ನು ನೀಡುವುದು 🫥  ಎಲ್ಲವೂ ಈಗ ಫೋನ್ ಮುಖಾಂತರ ನಡೆಯುತ್ತಿದೆ..  ನಾನು ಮೊದಲಿಗೆ ಹೇಳಿದ ಹಾಗೆ  ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಇದನ್ನು ಹಿರಿಯರು ಪಾಲಿಸುತ್ತಿದ್ದರು ಹಾಗೆ ಅದೇ ರೀತಿ ಕೂಡ ನಡೆಯುತ್ತಿದ್ದರು ಯಾಕೆಂದರೆ ಅಂದಿನ ಕಾಲದಲ್ಲಿ   ಗಂಡ ಹೆಂಡತಿಯೊ...

ಕಷ್ಟಗಳನ್ನು ಜೀವನದಲ್ಲಿ ಹೇಗೆ ಎದುರಿಸಬೇಕು? ಜೀವನವನ್ನು ಬದಲಾಯಿಸುವ ಕೆಲವು ಸಲಹೆಗಳು

  ಕಷ್ಟಗಳನ್ನು ಜೀವನದಲ್ಲಿ ಹೇಗೆ ಎದುರಿಸಬೇಕು?   ಜೀವನವನ್ನು ಬದಲಾಯಿಸುವ  ಕೆಲವು ಸಲಹೆಗಳು.. ಈ ಪ್ರಪಂಚದಲ್ಲಿ  ಪ್ರತಿಯೊಂದು ಜೀವಿಗೂ ಕಷ್ಟ  ನೋವುಗಳಿರುತ್ತೆ ಆದರೆ ಮನುಷ್ಯ ಮಾತ್ರ ಕಷ್ಟ  ಬಂದರೆ ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾನೆ. ಮೊದಲಿಗೆ ಈ ಕಷ್ಟ ನಮಗೆ ಯಾಕೆ ಬಂತು ಈ ಕಷ್ಟದಿಂದ ಹೇಗೆ ಹೊರಬರಬೇಕು ಈ ಕಷ್ಟದಿಂದ ನಾವು ಜೀವನದಲ್ಲಿ ಯಾವ ಪಾಠ ಕಲಿತುಕೊಂಡೆವು..  ಈ ತರ ಸಕಾರಾತ್ಮಕ ಯೋಚನೆಗಳನ್ನು ಮಾಡಿದರೆ, ಖಂಡಿತವಾಗಿಯೂ ನಾವು ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಪರಿಸ್ಥಿತಿ ಬರೋದಿಲ್ಲ.. ಇಂದು ಮನುಷ್ಯನು  ಬಲಹೀನತೆಗೆ ಒಳಗೊಂಡು ತನಗೆ ಏನೇ ಒಂದು ನೋವು ಬಂದರೂ ಅದನ್ನು ಎದುರಿಸುವ ಬದಲು ಜೀವವನ್ನು ಕಳೆದುಕೊಳ್ಳುತ್ತಿದ್ದಾನೆ.. ಇತ್ತೀಚೆಗಷ್ಟೇ ನಡೆದ ಒಂದು ದುರಂತ ಕಥೆ ನೀವು ಕೇಳಿರಬಹುದು ಉಸ್ತಾದ್   ಅಂದರೆ ಮಕ್ಕಳಿಗೆ ವಿದ್ಯೆ ಕಲಿಸುವ ಒಬ್ಬ  ಮದರಸದ  ಗುರು ಮನೆ ಸಾಲ ಇದೆ ಎಂದು  ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.. ಆತ್ಮಹತ್ಯೆ ಮಹಾ ಪಾಪ ಎಂದು ಮಕ್ಕಳಿಗೆ ಹೇಳಿಕೊಟ್ಟ ಅದೇ ಗುರು ಅವರೇ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.. ಮನುಷ್ಯನು  ಮಾನಸಿಕವಾಗಿ ಬಲಹೀನತೆಗೆ ಒಳಗೊಂಡಾಗ ಇಂತಹ  ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾನೆ... ದಯವಿಟ್ಟು ಇಂತಹ ಒಂದು ಕೆಟ್ಟ ನಿರ್ಧಾರ  ಯಾವತ್ತೂ ತೆಗ...