ಮಾಂಸದಿಂದ ತುಂಬಿದ ಈ ದೇಹ ಶಾಶ್ವತವಲ್ಲ
ಹುಚ್ಚು ಮಾನವ ಮಾಂಸ ಖಂಡಗಳಿಂದ ತುಂಬಿದ ದೇಹವನ್ನು ಅಪಾರವಾಗಿ ಪ್ರೀತಿಸುತ್ತಾನೆ ಅದರಲ್ಲೂ ತಾರತಮ್ಯವನ್ನು ಮಾಡುತ್ತಾ ಒಬ್ಬರಿಗೊಬ್ಬರು ಕೀಳರಿಮೆಯಿಂದ ನಡೆಯುತ್ತಿದ್ದಾರೆ
ನಾವು ಮರಣ ಹೊಂದಿದ ಮೇಲೆ ನಮ್ಮ ದೇಹವನ್ನು ಕುಕ್ಕಿ ತಿನ್ನಲು ಆವೆಷ್ಟೋ ಜೀವಿಗಳು ಕಾಯುತ್ತಿದ್ದವೆ..
ಯಾವ ದೇಹದ ಅಂದ ಚಂದವು ಶಾಶ್ವತವಲ್ಲ ಎಲ್ಲಾ ದೇಹಕ್ಕೂ ಮುಪ್ಪು ಬರಲಿದೆ ಸಾವು ಖಚಿತವಾಗಿದೆ..
ಇಂದು ನಿನ್ನ ದೇಹವು ಬಲಿಷ್ಠವಾಗಿರಬಹುದು, ಸುಂದರವಾಗಿರಬಹುದು, ಆರೋಗ್ಯವಾಗಿರಬಹುದು. ಆದರೆ ಈ ದೇಹವು ಶಾಶ್ವತವಲ್ಲ. ಒಂದು ದಿನ ಅದು ವೃದ್ಧವಾಗುತ್ತದೆ, ದುರ್ಬಲವಾಗುತ್ತದೆ ಮತ್ತು ಅಂತಿಮವಾಗಿ ಮಣ್ಣಿನಲ್ಲಿ ಲೀನವಾಗುತ್ತದೆ.
ಅಲ್ಲಾಹನು ಪ್ರತಿಯೊಬ್ಬ ಮನುಷ್ಯನಿಗೂ ಮರಣವನ್ನು ನಿಶ್ಚಯಿಸಿದ್ದಾನೆ. ಮರಣದಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಈ ಲೋಕದ ಸೌಂದರ್ಯ, ಸಂಪತ್ತು, ಅಧಿಕಾರ ಮತ್ತು ದೇಹದ ಬಲದ ಬಗ್ಗೆ ಅಹಂಕಾರ ಪಡುವುದು ಮೂರ್ಖತನ..
ಯೌವ್ವನವು ಅಲ್ಲಾಹನು ನೀಡಿದ ಅತ್ಯುತ್ತಮವಾದ ಕಾಲವಾಗಿದೆ.. ಆ ಸಮಯದಲ್ಲಿ
ಪರಪುರುಷ ಅಥವಾ ಪರ ಸ್ತ್ರೀಯರ ಮೇಲೆ ಆಸೆ ಪಡುವುದು ಅಕ್ಷರಸ ತಪ್ಪಾಗಿದೆ .
ನಿಮ್ಮನ್ನು ಅಲ್ಲಾಹನಿಂದ ದೂರ ಮಾಡುವ ದೊಡ್ಡ ಕಾರಣಗಳಲ್ಲಿ ಕಾಮ (ಶಹ್ವತ್) ಮತ್ತು ಕ್ರೋಧ (ಘದಬ್) ಪ್ರಮುಖವಾಗಿವೆ. ಇವುಗಳನ್ನು ನಿಯಂತ್ರಿಸದಿದ್ದರೆ ಮನುಷ್ಯನು ಅನೇಕ ಪಾಪಗಳಲ್ಲಿ ಬೀಳುತ್ತಾನೆ. ಕಾಮವು ವ್ಯಭಿಚಾರ, ಅಶ್ಲೀಲತೆ ಮತ್ತು ಅನೈತಿಕತೆಯ ಕಡೆಗೆ ಕರೆದೊಯ್ಯುತ್ತದೆ. ಕ್ರೋಧವು ದ್ವೇಷ, ಜಗಳ, ಹಿಂಸೆ ಮತ್ತು ಅನ್ಯಾಯಕ್ಕೆ ಕಾರಣವಾಗುತ್ತದೆ.
ಅಲ್ಲಾಹನು ನಮಗೆ ಈ ಲೋಕವನ್ನು ಕೇವಲ ಮನಬಂದಂತೆ ಬದುಕಲು ನೀಡಿಲ್ಲ. ಪ್ರತಿಯೊಂದು ಮಾತು, ಪ್ರತಿಯೊಂದು ಕರ್ಮ ಮತ್ತು ಪ್ರತಿಯೊಂದು ಉದ್ದೇಶದ ಬಗ್ಗೆ ಕಿಯಾಮತ್ ದಿನದಲ್ಲಿ ಲೆಕ್ಕ ಕೇಳಲಾಗುತ್ತದೆ.
ಮಣ್ಣನ್ನು ಮಾಂಸದ ಖಂಡಗಳನ್ನಾಗಿ ಮಾಡಿ ನಮ್ಮನ್ನು ಸೃಷ್ಟಿಸಿದವನು ಅದೇ ಮಾಂಸ ಖಂಡಗಳನ್ನು ಮಣ್ಣಾಗಿಸುವುದು ಆತನಿಗೆ ಕ್ಷಣ ಮಾತ್ರದ ಕೆಲಸವಾಗಿದೆ...
ಅಲ್ಲಾಹನ ಆದೇಶಗಳನ್ನು ಉಲ್ಲಂಘಿಸಿ, ಪಾಪದಲ್ಲಿ ನಿರಂತರವಾಗಿ ಬದುಕಿ, ಪಶ್ಚಾತ್ತಾಪವಿಲ್ಲದೆ ಮರಣ ಹೊಂದಿದವರಿಗೆ ಕಠಿಣ ಶಿಕ್ಷೆಯ ಬಗ್ಗೆ ಕುರ್‌ಆನ್ ಮತ್ತು ಹದೀಸ್ ಎಚ್ಚರಿಕೆ ನೀಡುತ್ತವೆ. ನರಕದ ಶಿಕ್ಷೆ ಅತ್ಯಂತ ಭಯಾನಕವಾಗಿದೆ. ಅಲ್ಲಿ ಯಾರಿಗೂ ಸಹಾಯ ಮಾಡಲು ಸಾಧ್ಯವಿಲ್ಲ. ಹಾಗೆ ಆ ಶಿಕ್ಷೆಯನ್ನು ಅನುಭವಿಸಲು ಸುಭಾಹನಲ್ಲ ನಮ್ಮಿಂದ ಸಾಧ್ಯವಾಗದ ಮಾತು. .
ಆದರೆ ಅಲ್ಲಾಹನು ಅತ್ಯಂತ ಕರುಣಾಮಯನು. ಮನುಷ್ಯನು ತನ್ನ ತಪ್ಪುಗಳನ್ನು ಅರಿತು, ಪ್ರಾಮಾಣಿಕವಾಗಿ ತೌಬಾ ಮಾಡಿ, ಪಾಪಗಳನ್ನು ತ್ಯಜಿಸಿ, ಅಲ್ಲಾಹನ ಕಡೆಗೆ ಮರಳಿದರೆ ಅಲ್ಲಾಹನು ಕ್ಷಮಿಸುವವನಾಗಿದ್ದಾನೆ.
ಆದ್ದರಿಂದ ನಮ್ಮ ಜೀವನದ ಗುರಿ ಕೇವಲ ದೇಹವನ್ನು ಸಂತೋಷಪಡಿಸುವುದಲ್ಲ; ಆತ್ಮವನ್ನು ಪರಿಶುದ್ಧಗೊಳಿಸುವುದಾಗಿದೆ. ನಮಾಝ್, ಕುರ್‌ಆನ್ ಪಠಣ, ಅಲ್ಲಾಹನ ಸ್ಮರಣೆ, ಸತ್ಪ್ರವೃತ್ತಿ ಮತ್ತು ಒಳ್ಳೆಯ ನಡತೆಯ ಮೂಲಕ ಜೀವನವನ್ನು ಅಲಂಕರಿಸೋಣ. ಕಾಮ, ಕ್ರೋಧ, ಅಹಂಕಾರ ಮತ್ತು ಲೋಭವನ್ನು ನಿಯಂತ್ರಿಸಿ ಅಲ್ಲಾಹನ ವಿಧೇಯರಾಗೋಣ.
ಈ ದೇಹ ನಶ್ವರ. ಆದರೆ ನಮ್ಮ ಕರ್ಮಗಳ ಫಲ ಶಾಶ್ವತ.
ಅಲ್ಲಾಹನು ನಮ್ಮೆಲ್ಲರನ್ನು ಸನ್ಮಾರ್ಗದಲ್ಲಿ ನಡೆಸಲಿ, ಪಾಪಗಳಿಂದ ಕಾಪಾಡಲಿ ಮತ್ತು ತನ್ನ ಅಪಾರ ಕರುಣೆಯಿಂದ ಕ್ಷಮಿಸಲಿ. ಆಮೀನ್.
ಸಂಪಾದಕಿ
ಯಾಸ್ಮೀನ್ ರಿಯಾಜ್ ಮೂಡಬಿದಿರೆ
ಜನರಿಗೆ ಮಾಹಿತಿ ತಿಳಿಸುವುದೇ ನಮ್ಮ ಮುಖ್ಯ ಗುರಿ...

Comments
Post a Comment