ಮಾನವನು ಎಷ್ಟೇ ದೊಡ್ಡವನಾಗಿದ್ದರೂ, ಎಷ್ಟೇ ಸಂಪತ್ತನ್ನು ಗಳಿಸಿದ್ದರೂ, ಎಷ್ಟೇ ಅಧಿಕಾರವನ್ನು ಹೊಂದಿದ್ದರೂ ಒಂದು ದಿನ ಈ ಲೋಕವನ್ನು ಬಿಟ್ಟು ಹೋಗಲೇಬೇಕು. ಇದೇ ಜೀವನದ ಅಚಲ ಸತ್ಯ. ನಾವು ಈ ಭೂಮಿಗೆ ಖಾಲಿ ಕೈಯಲ್ಲಿ ಬರುತ್ತೇವೆ, ಖಾಲಿ ಕೈಯಲ್ಲೇ ಹೋಗುತ್ತೇವೆ. ನಮ್ಮೊಂದಿಗೆ ನಮ್ಮ ಒಳ್ಳೆಯ ಕಾರ್ಯಗಳು , ಮಾಡಿದ ಸತ್ಕರ್ಮಗಳು ಬೇರೆಯವರಿಗೆ ನೀಡಿದ ದಾನ ಧರ್ಮ , ಮಾಡಿದ ಉಪವಾಸ, ಹೊರತು ಹಣ, ಹೆಸರು ಐಷಾರಾಮಿ ಮನೆ ದುಬಾರಿ ಕಾರು ನಿನ್ನ ಸಂಪತ್ತು , ಕೊನೆಗೆ ನೀನು ಹಾಕಿಕೊಂಡ ಉಡುಪು ಕೂಡ ನಿನ್ನೊಂದಿಗೆ ಬರುವುದಿಲ್ಲ..ಇಷ್ಟು ತಿಳಿದಿದ್ದರೆ ಇಂದು ಯಾರೂ ಕೂಡ " ಮರಣ" ವನ್ನು ದ್ವೇಷಿಸುತ್ತಿರಲಿಲ್ಲ.. ಇಂದಿನ ಜಗತ್ತಿನಲ್ಲಿ ಪ್ರತಿಯೊಬ್ಬರೂ ಹಣ, ಆಸ್ತಿ, ಅಧಿಕಾರ, ಹೆಸರಿನ ಹಿಂದೆ ಓಡುತ್ತಿದ್ದಾರೆ. ಉತ್ತಮ ಜೀವನವನ್ನು ಕಟ್ಟಿಕೊಳ್ಳುವುದು ತಪ್ಪಲ್ಲ. ಆದರೆ ಈ ಎಲ್ಲದರ ಮಧ್ಯೆ ಈ ಲೋಕ ಶಾಶ್ವತವಲ್ಲ ಎಂಬ ದೊಡ್ಡ ಸತ್ಯವನ್ನು ನಾವು ಕೆಲವೊಮ್ಮೆ ಮರೆತುಬಿಡುತ್ತೇವೆ . ಆದರೆ ಜೀವನದ ಕೊನೆಯ ಕ್ಷಣದಲ್ಲಿ ಅವನಿಗೆ ಅರಿವಾಗುವುದು ಒಂದೇ ವಿಷಯ—ಇಷ್ಟು ವರ್ಷಗಳ ಓಟದ ಅಂತ್ಯ ಇಷ್ಟೇ ಎಂದು. ನಾವು ಪ್ರತಿ ದಿನ ನೋಡುತ್ತೇವೆ. ಹೂವು ಅರಳುತ್ತದೆ, ಕೆಲವೇ ದಿನಗಳಲ್ಲಿ ಒಣಗುತ್ತದೆ. ದೊಡ್ಡ ದೊಡ್ಡ ಮರಗಳೂ ಒಂದು ದಿನ ನೆಲಕ್ಕುರುಳುತ್ತವೆ. ಕೆಲವೊಮ್ಮೆ ಪ್ರಕೃತಿಯ ವಿಕೋಪಕ್ಕೆ ಇಡೀ ಊರಿಗೆ ಊರೇ ನಾಶವಾಗುತ್ತದೆ...
It's my library.. anybody can read it without pay... love my books and credit your love ❤️