Skip to main content

ಉದ್ಯೋಗಿನಿ ಯೋಜನೆ



ಉದ್ಯೋಗಿನಿ ಮಹಿಳೆಯರಿಗೆ ಕರ್ನಾಟಕ ಸರ್ಕಾರದಿಂದ 90 ಸಾವಿರ ರೂಪಾಯಿ ಸಬ್ಸಿಡಿ//ಉದ್ಯೋಗಿನಿ ಸ್ವಯಂ ಉದ್ಯೋಗಕ್ಕೆ ಮಹಿಳೆಯರಿಗೆ ಆದ್ಯತೆ ಮಹಿಳಾ ಸಬಲೀಕರಣಕ್ಕಾಗಿ ಅಷ್ಟಕ್ಕೂ ಮಹಿಳೆಯರಿಗೆ 3 ಲಕ್ಷ ಸಾಲ ಹಾಗು 90 ಸಾವಿರ ಸಬ್ಸಿಡಿ ಈ ಯೋಜನೆಯ ಉದ್ದೇಶವೇನು .? ಈ ಯೋಜನೆಯನ್ನು ಯಾರೆಲ್ಲ ಪಡೆಯಬಹುದು .? ಮತ್ತೆ ಈ ಯೋಜನೆಯನ್ನು ಹೇಗೆ ಪಡೆಯಬಹುದು .? ಅನ್ನೋ ಸಂಪೂರ್ಣ ಮಾಹಿತಿ ಯನ್ನು ಈ ಕೆಳಗೆ ನೀಡಿರುವೆನು.
ಮಹಿಳಾ ಸಬಲೀಕರಣಕ್ಕಾಗಿ ರಾಜ್ಯ ಸರ್ಕಾರ ಹಲವು ಯೋಜನೆಗಳನ್ನು ತಂದಿದೆ, ಆ ಯೋಜನೆಯಲ್ಲಿ "ಉದ್ಯೋಗಿನಿ" ಯೋಜನೆ ಕೂಡ ಒಂದು. ಈ ಯೋಜನೆಯ ಉದ್ದೇಶ ಮಹಿಯರು ಉದ್ಯಮಶೀಲರಾಗಿರಲಿ ಅನ್ನೋದು. ಈ ಯೋಜನೆಯನ್ನು ಪಡೆಯಬೇಕೆಂದರೆ 55 ವರ್ಷದೊಳಗಿನ ಮಹಿಳೆಯರು ವಾರ್ಷಿಕ ಆದಾಯ1.5ಲಕ್ಷ ರೂ ಹೊಂದಿರುವಂತವರು ಈ ಯೋಜನೆಯನ್ನು ಪಡೆಯಬಹುದು. ಪ್ರತಿ ಜಿಲ್ಲೆಯಲ್ಲಿ ಮಹಿಳಾ ಅಭಿವೃದ್ಧಿ ನಿಗಮ ಇರುತ್ತದೆ. ನಿಮಗೆ ಸಂಬಂಧ ಪಟ್ಟ ಜಿಲ್ಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ನಿಗಮದ ನಿರೀಕ್ಷಕರು ಇರುತ್ತಾರೆ ಇವರುಗಳು ಅರ್ಜಿಯನ್ನು ಸಂಗ್ರಹಿಸುತ್ತಾರೆ. 3 ಲಕ್ಷ ಸಾಲವನ್ನು ವಾಣಿಜ್ಯ ಬ್ಯಾಂಕುಗಳು ಹಾಗು ರಿಸರ್ವ್ ಬ್ಯಾಂಕ್ ಹಾಗು ಜಿಲ್ಲಾ ಸಹಕಾರಿ ಬ್ಯಾಂಕ್ ಗಳ ಮೂಲಕ ಕೊಡಲಾಗುವುದು ಇನ್ನು ಉಳಿದ 90 ಸಾವಿರ ಸಬ್ಸಿಡಿ ಹಣವನ್ನು ನಿಗಮ ಭರಿಸಲಿದೆ. ವ್ಯಾಪಾರಕ್ಕೆ ಸಂಬಂಧಿಸಿದ್ದಂತೆ ದಿನಸಿ ಅಂಗಡಿ, ಬೇಕರಿ, ಅಗರಬತ್ತಿ ಉಪ್ಪಿನಕಾಯಿ ಮುಂತಾದ 80 ಕ್ಕೂ ಹೆಚ್ಚು ಉದ್ಯಮವನ್ನು ಪ್ರಾರಂಭಿಸಬಹುದು..

Comments

Popular posts from this blog

ಮಾಂಸದಿಂದ ತುಂಬಿದ ಈ ದೇಹ ಶಾಶ್ವತವಲ್ಲ

 ಮಾಂಸದಿಂದ ತುಂಬಿದ ಈ ದೇಹ ಶಾಶ್ವತವಲ್ಲ ಹುಚ್ಚು ಮಾನವ ಮಾಂಸ ಖಂಡಗಳಿಂದ ತುಂಬಿದ ದೇಹವನ್ನು ಅಪಾರವಾಗಿ ಪ್ರೀತಿಸುತ್ತಾನೆ ಅದರಲ್ಲೂ ತಾರತಮ್ಯವನ್ನು ಮಾಡುತ್ತಾ ಒಬ್ಬರಿಗೊಬ್ಬರು ಕೀಳರಿಮೆಯಿಂದ ನಡೆಯುತ್ತಿದ್ದಾರೆ  ನಾವು ಮರಣ ಹೊಂದಿದ ಮೇಲೆ ನಮ್ಮ ದೇಹವನ್ನು ಕುಕ್ಕಿ ತಿನ್ನಲು ಆವೆಷ್ಟೋ ಜೀವಿಗಳು ಕಾಯುತ್ತಿದ್ದವೆ.. ಯಾವ ದೇಹದ ಅಂದ ಚಂದವು ಶಾಶ್ವತವಲ್ಲ ಎಲ್ಲಾ ದೇಹಕ್ಕೂ ಮುಪ್ಪು ಬರಲಿದೆ ಸಾವು ಖಚಿತವಾಗಿದೆ.. ಇಂದು ನಿನ್ನ ದೇಹವು ಬಲಿಷ್ಠವಾಗಿರಬಹುದು, ಸುಂದರವಾಗಿರಬಹುದು, ಆರೋಗ್ಯವಾಗಿರಬಹುದು. ಆದರೆ ಈ ದೇಹವು ಶಾಶ್ವತವಲ್ಲ. ಒಂದು ದಿನ ಅದು ವೃದ್ಧವಾಗುತ್ತದೆ, ದುರ್ಬಲವಾಗುತ್ತದೆ ಮತ್ತು ಅಂತಿಮವಾಗಿ ಮಣ್ಣಿನಲ್ಲಿ ಲೀನವಾಗುತ್ತದೆ. ಅಲ್ಲಾಹನು ಪ್ರತಿಯೊಬ್ಬ ಮನುಷ್ಯನಿಗೂ ಮರಣವನ್ನು ನಿಶ್ಚಯಿಸಿದ್ದಾನೆ. ಮರಣದಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಈ ಲೋಕದ ಸೌಂದರ್ಯ, ಸಂಪತ್ತು, ಅಧಿಕಾರ ಮತ್ತು ದೇಹದ ಬಲದ ಬಗ್ಗೆ ಅಹಂಕಾರ ಪಡುವುದು ಮೂರ್ಖತನ.. ಯೌವ್ವನವು ಅಲ್ಲಾಹನು ನೀಡಿದ ಅತ್ಯುತ್ತಮವಾದ ಕಾಲವಾಗಿದೆ.. ಆ ಸಮಯದಲ್ಲಿ  ಪರಪುರುಷ ಅಥವಾ ಪರ ಸ್ತ್ರೀಯರ ಮೇಲೆ ಆಸೆ ಪಡುವುದು ಅಕ್ಷರಸ ತಪ್ಪಾಗಿದೆ . ನಿಮ್ಮನ್ನು ಅಲ್ಲಾಹನಿಂದ ದೂರ ಮಾಡುವ ದೊಡ್ಡ ಕಾರಣಗಳಲ್ಲಿ ಕಾಮ (ಶಹ್ವತ್) ಮತ್ತು ಕ್ರೋಧ (ಘದಬ್) ಪ್ರಮುಖವಾಗಿವೆ. ಇವುಗಳನ್ನು ನಿಯಂತ್ರಿಸದಿದ್ದರೆ ಮನುಷ್ಯನು ಅನೇಕ ಪಾಪಗಳಲ್ಲಿ ಬೀಳುತ್ತಾನೆ. ಕಾಮ...

ಗಂಡ-ಹೆಂಡತಿಯ ಬಾಂಧವ್ಯ ಹೇಗಿರಬೇಕು? | ಸುಖೀ ದಾಂಪತ್ಯ ಜೀವನಕ್ಕೆ ಅಮೂಲ್ಯ ಸಲಹೆಗಳು

 ಗಂಡ-ಹೆಂಡತಿಯ ಬಾಂಧವ್ಯ.   ಹೇಗಿರಬೇಕು? | ಸುಖೀ ದಾಂಪತ್ಯ.    ಜೀವನಕ್ಕೆ ಅಮೂಲ್ಯ ಸಲಹೆಗಳು ಗಂಡ ಹೆಂಡತಿ ಜಗಳ ನಮ್ಮ ಹಿರಿಯರು ಹೇಳಿದ ಹಾಗೆ. ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಆದರೆ ಈಗ ಗಂಡ ಹೆಂಡತಿ ಜಗಳ ವಿಚ್ಛೇದನ ಸಿಗುವ ತನಕ  ಆಗಿನ ಕಾಲಕ್ಕೂ ಈಗಿನ ಕಾಲಕ್ಕೂ ಒಂದು ಸಣ್ಣ ಗಾದೆ ಮಾತು ಎಷ್ಟೊಂದು ಬದಲಾವಣೆಯನ್ನು ಸೂಚಿಸುತ್ತದೆ   ಇಸ್ಲಾಂ ಧಾರ್ಮಿಕದಲ್ಲಿ  ಉಲ್ಲೇಖವಾದ ಒಂದು ಮಾತಿದೆ  ಗಂಡ ಹೆಂಡತಿ ಒಬ್ಬರಿಗೊಬ್ಬರು ಮಾತನಾಡುವಾಗ ಅವರ ಕಣ್ಣಿನಲ್ಲಿ  ಅವರ ಪ್ರತಿಬಿಂಬ ಕಾಣಬೇಕು ಅಂದರೆ ಒಬ್ಬರಿಗೊಬ್ಬರು ಮಾತನಾಡುವಾಗ    ಮುಖಮುಖಿಯಾಗಿ ಮಾತನಾಡಬೇಕು.   ಇದರಿಂದ ಪ್ರೀತಿ ಹೆಚ್ಚಾಗುತ್ತೆ ಸಂಬಂಧ ಇನ್ನು ಕೂಡ ಗಟ್ಟಿಯಾಗುತ್ತೆ ಆದರೆ ಈಗ  ಮುಖ ನೋಡುವುದು ಬಿಡಿ  ಮಾತನಾಡಲು ಕೂಡ ಸಮಯ ಇರುವುದಿಲ್ಲ   ಯಾಕಂದರೆ ಈಗ ಎಲ್ಲವೂ ಆಧುನಿಕವಾಗಿದೆ ಒಂದೇ ಮನೆಯಲ್ಲಿ ಇದ್ದುಕೊಂಡು ಹೆಂಡತಿಯೊಂದಿಗೆ ಮಾತನಾಡಬೇಕೆಂದರೆ ಮೆಸೇಜ್ ಮುಖಾಂತರ ಸಂದೇಶವನ್ನು ನೀಡುವುದು 🫥  ಎಲ್ಲವೂ ಈಗ ಫೋನ್ ಮುಖಾಂತರ ನಡೆಯುತ್ತಿದೆ..  ನಾನು ಮೊದಲಿಗೆ ಹೇಳಿದ ಹಾಗೆ  ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಇದನ್ನು ಹಿರಿಯರು ಪಾಲಿಸುತ್ತಿದ್ದರು ಹಾಗೆ ಅದೇ ರೀತಿ ಕೂಡ ನಡೆಯುತ್ತಿದ್ದರು ಯಾಕೆಂದರೆ ಅಂದಿನ ಕಾಲದಲ್ಲಿ   ಗಂಡ ಹೆಂಡತಿಯೊ...

ಒಂದು ದಿನ ಎಲ್ಲವನ್ನೂ ಬಿಟ್ಟು ಹೋಗಲೇಬೇಕು

ಮಾನವನು ಎಷ್ಟೇ ದೊಡ್ಡವನಾಗಿದ್ದರೂ,  ಎಷ್ಟೇ ಸಂಪತ್ತನ್ನು ಗಳಿಸಿದ್ದರೂ, ಎಷ್ಟೇ ಅಧಿಕಾರವನ್ನು ಹೊಂದಿದ್ದರೂ ಒಂದು ದಿನ ಈ ಲೋಕವನ್ನು ಬಿಟ್ಟು ಹೋಗಲೇಬೇಕು. ಇದೇ ಜೀವನದ ಅಚಲ ಸತ್ಯ. ನಾವು ಈ ಭೂಮಿಗೆ ಖಾಲಿ ಕೈಯಲ್ಲಿ ಬರುತ್ತೇವೆ, ಖಾಲಿ ಕೈಯಲ್ಲೇ ಹೋಗುತ್ತೇವೆ. ನಮ್ಮೊಂದಿಗೆ ನಮ್ಮ ಒಳ್ಳೆಯ ಕಾರ್ಯಗಳು , ಮಾಡಿದ ಸತ್ಕರ್ಮಗಳು ಬೇರೆಯವರಿಗೆ ನೀಡಿದ ದಾನ ಧರ್ಮ , ಮಾಡಿದ ಉಪವಾಸ,  ಹೊರತು ಹಣ,  ಹೆಸರು ಐಷಾರಾಮಿ ಮನೆ ದುಬಾರಿ ಕಾರು ನಿನ್ನ ಸಂಪತ್ತು , ಕೊನೆಗೆ  ನೀನು ಹಾಕಿಕೊಂಡ ಉಡುಪು ಕೂಡ ನಿನ್ನೊಂದಿಗೆ ಬರುವುದಿಲ್ಲ..ಇಷ್ಟು  ತಿಳಿದಿದ್ದರೆ ಇಂದು ಯಾರೂ ಕೂಡ " ಮರಣ" ವನ್ನು ದ್ವೇಷಿಸುತ್ತಿರಲಿಲ್ಲ.. ಇಂದಿನ ಜಗತ್ತಿನಲ್ಲಿ ಪ್ರತಿಯೊಬ್ಬರೂ ಹಣ, ಆಸ್ತಿ, ಅಧಿಕಾರ, ಹೆಸರಿನ ಹಿಂದೆ ಓಡುತ್ತಿದ್ದಾರೆ. ಉತ್ತಮ ಜೀವನವನ್ನು ಕಟ್ಟಿಕೊಳ್ಳುವುದು ತಪ್ಪಲ್ಲ. ಆದರೆ ಈ ಎಲ್ಲದರ ಮಧ್ಯೆ ಈ ಲೋಕ ಶಾಶ್ವತವಲ್ಲ ಎಂಬ ದೊಡ್ಡ ಸತ್ಯವನ್ನು ನಾವು ಕೆಲವೊಮ್ಮೆ ಮರೆತುಬಿಡುತ್ತೇವೆ  . ಆದರೆ ಜೀವನದ ಕೊನೆಯ ಕ್ಷಣದಲ್ಲಿ ಅವನಿಗೆ ಅರಿವಾಗುವುದು ಒಂದೇ ವಿಷಯ—ಇಷ್ಟು ವರ್ಷಗಳ ಓಟದ ಅಂತ್ಯ ಇಷ್ಟೇ ಎಂದು. ನಾವು ಪ್ರತಿ ದಿನ   ನೋಡುತ್ತೇವೆ. ಹೂವು ಅರಳುತ್ತದೆ, ಕೆಲವೇ ದಿನಗಳಲ್ಲಿ ಒಣಗುತ್ತದೆ. ದೊಡ್ಡ ದೊಡ್ಡ ಮರಗಳೂ ಒಂದು ದಿನ ನೆಲಕ್ಕುರುಳುತ್ತವೆ. ಕೆಲವೊಮ್ಮೆ ಪ್ರಕೃತಿಯ ವಿಕೋಪಕ್ಕೆ ಇಡೀ ಊರಿಗೆ ಊರೇ ನಾಶವಾಗುತ್ತದೆ...